Select Your Language

Notifications

webdunia
webdunia
webdunia
webdunia

ಐಪಿಎಲ್: ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಥ್ರಿಲ್ಲಿಂಗ್ ಗೆಲುವು

ಐಪಿಎಲ್: ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಥ್ರಿಲ್ಲಿಂಗ್ ಗೆಲುವು
Mumbai , ಶುಕ್ರವಾರ, 12 ಮೇ 2017 (06:42 IST)
ಮುಂಬೈ: ಮೋಹಿತ್ ಶರ್ಮಾ ಫೈನಲ್ ಓವರ್ ನಲ್ಲಿ ಆ ಮೂರು ಡಾಟ್ ಬಾಲ್ ಹಾಕಿರದೇ ಇದ್ದರೆ ಮುಂಬೈ ಈ ಹೈ ಸ್ಕೋರಿಂಗ್ ಪಂದ್ಯವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿತ್ತು. ಆದರೆ ಪಂಜಾಬ್ ಅಗ್ರ ಸ್ಥಾನಿ ಮುಂಬೈಗೆ ಗೆಲುವಿನ ಸಿಹಿ ನೀಡಲಿಲ್ಲ.

 
ನಿನ್ನೆ ನಡೆದ ಐಪಿಎಲ್ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 230 ರನ್ ಗುರಿ ನಿಗದಿಪಡಿಸಿತು. ವೃದ್ಧಿಮಾನ್ ಸಹಾ 55 ಬಾಲ್ ಗಳಲ್ಲಿ 93 ರನ್ ಗಳಿಸಿ ಮಿಂಚಿದರು.

ನಂತರ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪಂದ್ಯವನ್ನು ರೋಚಕ ಘಟ್ಟದತ್ತ ಕರೆದೊಯ್ದಿತು. ಕೊನೆಯ ಓವರ್ ನಲ್ಲಿ 15 ರನ್ ಗಳಿಸಿದ್ದರೆ ಸಾಕಿತ್ತು. ಆದರೆ ಮೊದಲ ಎಸೆತದಲ್ಲೇ 50 ರನ್ ಗಳಿಸಿದ್ದ ಕಿರನ್ ಪೊಲಾರ್ಡ್ ರನೌಟ್ ಆದರು.

ನಂತರದ ಎಸೆತ ಸಿಕ್ಸರ್ ಆಗಿತ್ತು. ಅದಾಗಲೇ ಪಂಜಾಬ್ ಆಟಗಾರರ ಹೃದಯ ಹೊಡೆದುಕೊಳ್ಳುತ್ತಿತ್ತು. ಆದರೆ ನಂತರದ ಮೂರು ಎಸೆತಗಳನ್ನು ಮೋಹಿತ್ ಶರ್ಮಾ ಡಾಟ್ ಬಾಲ್ ಎಸೆದಿದ್ದರಿಂದ ಪಂಜಾಬ್ ಪಂದ್ಯವುಳಿಸಿಕೊಂಡಿತು.

ಇದರೊಂದಿಗೆ 13 ಪಂದ್ಯಗಳಿಂದ 7 ಗೆಲುವು ದಾಖಲಿಸಿಕೊಂಡು 14 ಅಂಕಗಳೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆಯಿತು. ಇದರೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಬಳಿಕ ಕುಂಬ್ಳೆಗೆ ಗೇಟ್ ಪಾಸ್..?