Select Your Language

Notifications

webdunia
webdunia
webdunia
webdunia

ಐಪಿಎಲ್: ಮುಂಬೈ ಗೆಲ್ಲಲು ಮ್ಯಾಜಿಕ್ ಮಾಡಿದ ಅಜ್ಜಿ ಯಾರು ಗೊತ್ತಾ?!

ಐಪಿಎಲ್: ಮುಂಬೈ ಗೆಲ್ಲಲು ಮ್ಯಾಜಿಕ್ ಮಾಡಿದ ಅಜ್ಜಿ ಯಾರು  ಗೊತ್ತಾ?!
Hyderabad , ಮಂಗಳವಾರ, 23 ಮೇ 2017 (08:41 IST)
ಹೈದರಾಬಾದ್: ಭಾನುವಾರ ಮುಕ್ತಾಯಗೊಂಡ ಐಪಿಎಲ್ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ಕೊನೆಯ ಬಾಲ್ ನಲ್ಲಿ ಗೆಲುವು ದಾಖಲಿಸಿತು. ಅಷ್ಟೊಂದು ರೋಮಾಂಚಕಾರಿ ಪಂದ್ಯವನ್ನು ಗೆಲ್ಲಲು ನಿಜ ಕಾರಣ ಯಾರು ಗೊತ್ತಾ?

 
ಮಿಚೆಲ್ ಜಾನ್ಸನ್ ಎಂದು ನೀವಂದುಕೊಂಡರೆ ತಪ್ಪು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳಾಗುತ್ತಿವೆ. ಮುಂಬೈ ಗೆಲುವಿಗೆ ಕಾರಣವಾಗಿದ್ದು ಈ ಅಜ್ಜಿಯ ಪ್ರಾರ್ಥನೆಯಂತೆ!

ಮುಂಬೈ ಇಂಡಿಯನ್ಸ್ ಟ್ವಿಟರ್ ನಲ್ಲಿ ಈ ಅಜ್ಜಿ ಪ್ರಾರ್ಥನೆ ಮಾಡುತ್ತಿರುವ ಫೋಟೋ ಪ್ರಕಟಿಸುತ್ತಿದ್ದಂತೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದರು. ಆ ಪ್ರೇಯರ್ ಆಂಟಿಯಿಂದಾಗಿಯೇ ಗೆಲುವು ಸಾಧ್ಯವಾಯಿತು ಎಂದು ಕೊಂಡಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಟ ಅಭಿಷೇಕ್ ಬಚ್ಚನ್, ಇವರು ಬೇರೆ ಯಾರೂ ಅಲ್ಲ. ಮುಂಬೈ ಇಂಡಿಯನ್ಸ್ ಮಾಲಕಿ ನಿತಾ ಅಂಬಾನಿ ತಾಯಿ ಪೂರ್ಣಿಮಾ ಬೆನ್ ದಲಾಲ್ ಎಂದು ಅಜ್ಜಿಯ ಪರಿಚಯ ಮಾಡಿಕೊಟ್ಟರು. ಇವರು ಮುಂಬೈ ಇಂಡಿಯನ್ಸ್ ತಂಡದ ಲಕ್ಕಿ ಚಾರ್ಮ್ ಅಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯಕ್ಕೆ ಮೊದಲು ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆ ಹಾಡಿದ ಜಮ್ಮು ಕ್ರಿಕೆಟಿಗರು!