Select Your Language

Notifications

webdunia
webdunia
webdunia
webdunia

ಪಂದ್ಯಕ್ಕೆ ಮೊದಲು ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆ ಹಾಡಿದ ಜಮ್ಮು ಕ್ರಿಕೆಟಿಗರು!

ಪಂದ್ಯಕ್ಕೆ ಮೊದಲು ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆ ಹಾಡಿದ ಜಮ್ಮು ಕ್ರಿಕೆಟಿಗರು!
Srinagar , ಸೋಮವಾರ, 22 ಮೇ 2017 (14:56 IST)
ಶ್ರೀನಗರ: ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಪಂದ್ಯಾರಂಭಕ್ಕೆ ಕ್ರಿಕೆಟಿಗರು ಮೊದಲು ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆ ಹಾಡಿ ವಿವಾದ ಸೃಷ್ಟಿಸಿದ್ದಾರೆ.

 
ಹಿಂದೊಮ್ಮೆ ಜಮ್ಮುವಿನ ಕ್ಲಬ್ ಕ್ರಿಕೆಟ್ ಒಂದರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಗ ಕ್ರಿಕೆಟಿಗರು ಪಾಕ್ ರಾಷ್ಟ್ರಗೀತೆ ಹಾಡಿದ್ದು ಭಾರೀ ವಿವಾದವಾಗಿತ್ತಲ್ಲದೆ, ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಘಟನೆ ನಡೆದಿದೆ.

ಪೌಲ್ವಾಮಾ ಹಂಟರ್ಸ್ ಮತ್ತು ಪಂಪೋರಾ ಇಲೆವೆನ್ ನಡುವಿನ ಕ್ಲಬ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲ, ಪ್ರೇಕ್ಷಕರೂ ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ.  ಘಟನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ ನಾಯಕ ರೋಹಿತ್ ನಿದ್ದೆ ಮಾಡ್ತಿದ್ದರು!