Select Your Language

Notifications

webdunia
webdunia
webdunia
webdunia

ಐಪಿಎಲ್: ಪಂಜಾಬ್ ಕನಸು ಜೀವಂತವಾಗಿರಿಸಿದ ಬೌಲರ್ ಗಳು

ಐಪಿಎಲ್: ಪಂಜಾಬ್ ಕನಸು ಜೀವಂತವಾಗಿರಿಸಿದ ಬೌಲರ್ ಗಳು
Mohali , ಬುಧವಾರ, 10 ಮೇ 2017 (08:05 IST)
ಮೊಹಾಲಿ: ಅದ್ಭುತ ಬೌಲಿಂಗ್ ನೆರವಿನಿಂದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ 14 ರನ್ ಗಳಿಂದ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ಪಂದ್ಯಾವಳಿಯಲ್ಲಿ ಪ್ಲೇ ಆಫ್ ಹಂತದ ಆಸೆ ಜೀವಂತವಾಗಿರಿಸಿದೆ.

 
ಗೆಲುವಿಗೆ 168 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕೊತ್ತಾ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಕೋಲ್ಕೊತ್ತಾ ಪರ ಕ್ರಿಸ್ ಲಿನ್ ಮಾತ್ರ ಏಕಾಂಗಿಯಾಗಿ ಹೋರಾಡಿ 84 ರನ್ ಗಳಿಸಿದರು. ಆದರೆ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ.

ಅಲ್ಲದೆ ಕೊನೆಯ ಕ್ಷಣದಲ್ಲಿ ಪಂಜಾಬ್ ಶಿಸ್ತು ಬದ್ಧ ದಾಳಿ ನಡೆಸಿದ್ದರಿಂದ ಕೋಲ್ಕೊತ್ತಾಗೆ ಹೆಚ್ಚು ರನ್ ಗಳಿಸಲಾಗಲಿಲ್ಲ. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಗ್ಲೆನ್ ಮ್ಯಾಕ್ಸ್ ವೆಲ್ 44 ರನ್ ಗಳಿಸಿದರೆ, ವೃದ್ಧಿಮಾನ್ ಸಹಾ 38 ರನ್ ಗಳಿಸಿದರು.

ಇದರೊಂದಿಗೆ ಪಂಜಾಬ್ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು. ಇನ್ನೊಂದು  ಪಂದ್ಯ ಗೆದ್ದರೆ ಪ್ಲೇ ಆಫ್ ಕನಸು ಬಹುತೇಕ ನನಸಾಗಲಿದೆ. ಕೋಲ್ಕೊತ್ತಾ ದ್ವಿತೀಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ