ನವದೆಹಲಿ: ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಕೇಂದ್ರದ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವರ ಹಂಸರಾಜ್ ಅಹಿರ್ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ತಟಸ್ಥ ಸ್ಥಳದಲ್ಲಾದರೂ, ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ನಡೆಸಬಹುದೆಂಬ ಬಿಸಿಸಿಐ ಆಸೆಗೆ ಕತ್ತರಿ ಬಿದ್ದಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಕ್ರಿಕೆಟ್ ಸಮರ ನೋಡಲು ಬಯಸುತ್ತಿದ್ದ ಪ್ರೇಮಿಗಳಿಗೂ ನಿರಾಸೆ ತಂದಿದೆ.
ನಿನ್ನೆಯಷ್ಟೇ ಬಿಸಿಸಿಐ ತಟಸ್ಥ ಸ್ಥಳದಲ್ಲಾದರೂ ಕ್ರಿಕೆಟ್ ಸರಣಿ ನಡೆಸುವುದಕ್ಕೆ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು ಎಂಬ ವರದಿಗಳು ಬಂದಿತ್ತು. ಅತ್ತ ಪಾಕ್ ಕ್ರಿಕೆಟ್ ಮಂಡಳಿ ಕಾನೂನು ಸಮರಕ್ಕೆ ಮುಂದಾದ ಹಿನ್ನಲೆಯಲ್ಲಿ ಬಿಸಿಸಿಐ ಕ್ರಿಕೆಟ್ ಸರಣಿ ನಡೆಸಲು ಕೇಂದ್ರದ ಒಪ್ಪಿಗೆ ಕೇಳಿತ್ತು. ಈಗ ಸರ್ಕಾರದ ಒಪ್ಪಿಗೆ ಇಲ್ಲದೇ ಕ್ರಿಕೆಟ್ ಸರಣಿ ನಡೆಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ