Webdunia - Bharat's app for daily news and videos

Install App

ಟೀಂ ಇಂಡಿಯಾದ ಹಳೆ ಹುಲಿಯನ್ನು ಕರೆಸಿಕೊಂಡ ಗುಜರಾತ್ ಲಯನ್ಸ್

Webdunia
ಬುಧವಾರ, 26 ಏಪ್ರಿಲ್ 2017 (07:33 IST)
ರಾಜ್ ಕೋಟ್: ಗುಜರಾತ್ ಲಯನ್ಸ್ ತಂಡ ಪ್ರಮುಖ ಆಲ್ ರೌಂಡರ್ ಡ್ವಾನ್ ಬ್ರಾವೋ ಅವರ ಅಲಭ್ಯತೆಯಿಂದಾಗಿ ಸಂಕಷ್ಟದಲ್ಲಿದೆ. ಈ ತಂಡಕ್ಕೀಗ ಟೀಂ ಇಂಡಿಯಾದ ಒಂದು ಕಾಲದ ಪ್ರಮುಖ ಆಲ್ ರೌಂಡರ್ ಆಗಿದ್ದ ಇರ್ಫಾನ್ ಪಠಾಣ್ ರನ್ನು ಕರೆಸಿಕೊಂಡಿದೆ.

 
ಇರ್ಫಾನ್ ಪಂಜಾಬ್, ಚೆನ್ನೈ, ಹೈದರಾಬಾದ್ ತಂಡದ ಪರ ಐಪಿಎಲ್ ಪಂದ್ಯದಲ್ಲಿ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಪುಣೆ ತಂಡದ ಪರ ಆಡಿದ್ದರು. ಆದರೆ ಈ ಆವೃತ್ತಿಯಲ್ಲಿ 50 ಲಕ್ಷ ರೂ. ಮೂಲಧನದೊಂದಿಗೆ ಹರಾಜು ಪ್ರಕ್ರಿಯೆಯಲ್ಲಿದ್ದ ಅವರನ್ನು ಯಾವುದೇ ತಂಡ ಕೊಳ್ಳಲಿಲ್ಲ.

ಆದರೆ ಬ್ರಾವೋ ಗಾಯಗೊಂಡು ಐಪಿಎಲ್ ಕೂಟದಿಂದ ಹೊರ ನಡೆದ ಬೆನ್ನಲ್ಲೇ ಗುಜರಾತ್ ಲಯನ್ಸ್ ತಂಡ ಸ್ಥಳೀಯ ಪ್ರತಿಭೆಗೆ ಮಣೆ ಹಾಕಿದೆ. ಟ್ವಿಟರ್ ನಲ್ಲಿ ಲಯನ್ಸ್ ಸಮವಸ್ತ್ರ ಧರಿಸಿದ ಫೋಟೋ ಪ್ರಕಟಿಸಿದ ಇರ್ಫಾನ್ ‘ಈ ಅದ್ಭುತ ತಂಡದ ಭಾಗವಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಸಂದೇಶ ಬರೆದಿದ್ದಾರೆ.

ಇರ್ಫಾನ್ ಈ ಮೂಲಕ ಆರನೇ ಫ್ರಾಂಚೈಸಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ ಅಂತಿಮದಿಂದ ಎರಡನೇ ಸ್ಥಾನದಲ್ಲಿರುವ ಗುಜರಾತ್ 7 ಪಂದ್ಯಗಳಾಡಿದ್ದು, ಕೇವಲ ಎರಡರಲ್ಲಿ ಮಾತ್ರ ಗೆಲುವು ಕಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments