ನವದೆಹಲಿ: ಗೌತಮ್ ಗಂಭೀರ್ ಹೆಸರಿನಷ್ಟೇ ಗಂಭೀರ ಪ್ರವೃತ್ತಿಯವರು. ಇತರ ಕ್ರಿಕೆಟಿಗರ ಹಾಗೆ, ಡ್ಯಾನ್ಸ್ ಮಾಡು ಎಂದರೆ ಮಸ್ತ್ ಮಜಾ ಮಾಡುವ ಜಾಯಮಾನವದವರಲ್ಲ. ಇದು ಅವರ ಪತ್ನಿಗೆ ಸುತರಾಂ ಇಷ್ಟವಿಲ್ಲವಂತೆ.
ಇದೇ ಕಾರಣಕ್ಕೆ ಪತಿಯ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರಂತೆ ಪತ್ನಿ ನತಾಶ. ಈ ಬಗ್ಗೆ ಸ್ವತಃ ಗಂಭೀರ್ ಹೇಳಿಕೊಂಡಿದ್ದಾರೆ. ‘ಪಂಜಾಬಿ ಪತ್ನಿಯನ್ನು ಕಟ್ಟಿಕೊಂಡ ನನಗೆ ಅವರ ಆಹಾರವೆಲ್ಲಾ ಇಷ್ಟ. ಆದರೆ ಡ್ಯಾನ್ಸ್ ಮಾಡಲಾರೆ. ಇದೇ ವಿಚಾರಕ್ಕೆ ನತಾಶಾ ಹಲವು ಬಾರಿ ಸಿಟ್ಟಾಗಿದ್ದಾಳೆ. ಶಾರುಖ್ ಖಾನ್ ಗೆ ಕೂಡಾ ನನ್ನಿಂದ ಡ್ಯಾನ್ಸ್ ಮಾಡಿಸಲಾಗಿಲ್ಲ.
ಆದರೆ ಅದು ಕೊನೆಗೂ ಸಾಧ್ಯವಾಯಿತು. ಅದು ಜಾಹೀರಾತೊಂದರ ಚಿತ್ರೀಕರಣದಲ್ಲಿ.ಇದೇನಾದರೂ ನತಾಶಾಗೆ ಗೊತ್ತಾದರೆ ಮುಗಿಯಿತು ಕತೆ’ ಎಂದಿದ್ದಾರೆ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ