ಪುಣೆ: ಐಪಿಎಲ್ 10 ನೇ ಆವೃತ್ತಿಯಲ್ಲಿ ಪುಣೆ ತಂಡದ ನಾಯಕನಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತನಗೆ ಹಿಂದಿನ ನಾಯಕ ಧೋನಿಯ ಟಿಪ್ಸ್ ಬೇಕಾಗಿಲ್ಲ ಎಂದಿದ್ದಾರೆ.
ನಾಯಕತ್ವದ ವಿಚಾರದಲ್ಲಿ ಧೋನಿ ಟಿಪ್ಸ್ ಬೇಕಾಗಿಲ್ಲ. ನನ್ನದೇ ಶೈಲಿಯಲ್ಲಿ ತಂಡವನ್ನು ಮುನ್ನಡೆಸುತ್ತೇನೆ ಎಂದಿದ್ದಾರೆ. ‘ಹಲವರ ಅಭಿಪ್ರಾಯ ಕೇಳಿ ನಡೆದರೆ, ಯಾವುದೂ ಪ್ರಯೋಜನಕ್ಕೆ ಬಾರದು. ಅದಕ್ಕೇ ನನ್ನದೇ ಶೈಲಿಯಲ್ಲಿ ತಂಡವನ್ನು ಮುನ್ನಡೆಸುತ್ತೇನೆ’ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.
ಇದುವರೆಗೆ ನಾಯಕರಾಗಿದ್ದ ಧೋನಿ ಸ್ಥಾನಕ್ಕೆ ಈ ಆವೃತ್ತಿಯಲ್ಲಿ ಸ್ಮಿತ್ ರನ್ನು ಆಯ್ಕೆ ಮಾಡಲಾಗಿದೆ. ಧೋನಿ ಪುಣೆ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಯಲಿದ್ದಾರೆ. ಆದರೆ ಧೋನಿ ಮತ್ತು ತನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ