Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಧೋನಿ ಮತ್ತೊಂದು ದಾಖಲೆ

ಐಪಿಎಲ್ ನಲ್ಲಿ ಧೋನಿ ಮತ್ತೊಂದು ದಾಖಲೆ
Pune , ಶನಿವಾರ, 13 ಮೇ 2017 (10:27 IST)
ಪುಣೆ: ಪುಣೆ ರೈಸರ್ಸ್ ತಂಡದ ವಿಕೆಟ್ ಕೀಪರ್ ಆಗಿರುವ ಟೀಂ ಇಂಡಿಯಾ ಆಟಗಾರ ಧೋನಿ ಐಪಿಎಲ್ ನಲ್ಲಿ ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

 
ಐಪಿಎಲ್ ನಲ್ಲಿ ವಿಕೆಟ್ ಹಿಂದುಗಡೆ 100 ಬಾರಿ ಔಟ್ ಮಾಡಿದ ವಿಶಿಷ್ಟ ದಾಖಲೆ ಧೋನಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೇಯಾಸ್ ಐಯರ್ ನನ್ನು ಕ್ಯಾಚ್ ಮಾಡಿದ ಧೋನಿ ಈ ದಾಖಲೆ ಮಾಡಿದ್ದಾರೆ.

ಈ ಪಂದ್ಯವನ್ನು ಪುಣೆ 7 ರನ್ ಗಳಿಂದ ಸೋತಿತ್ತು. ಆದರೂ ಐಪಿಎಲ್ ನಲ್ಲಿ ಧೋನಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು. ಧೋನಿಗೆ ಇದು 156 ನೇ ಪಂದ್ಯವಾಗಿತ್ತು. 100 ರ ಸಾಧನೆಯಲ್ಲಿ ಧೋನಿ 71 ಕ್ಯಾಚ್ ಮತ್ತು 29 ಸ್ಟಂಪ್ ಔಟ್ ಮಾಡಿದ್ದಾರೆ.

ಆದರೆ ಈ ಸಾಧನೆ ಮಾಡಿದ ಏಕಮಾತ್ರ ವಿಕೆಟ್ ಕೀಪರ್ ಧೋನಿಯಲ್ಲ. ಇದಕ್ಕೂ ಮೊದಲು ಭಾರತದವರೇ ಆದ ದಿನೇಶ್ ಕಾರ್ತಿಕ್ ಈ ಸಾಧನೆ ಮಾಡಿ ಮೊದಲಿಗರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಸಿಕ್ತು ದುಬಾರಿ ಗಿಫ್ಟ್!