Select Your Language

Notifications

webdunia
webdunia
webdunia
webdunia

ಡೆಲ್ಲಿ ಡೇರ್ ಡೆವಿಲ್ಸ್ ಸಾಂಘಿಕ ಹೋರಾಟ: ಹೈದ್ರಾಬಾದ್`ಗೆ ಮರ್ಮಾಘಾತ

ಡೆಲ್ಲಿ ಡೇರ್ ಡೆವಿಲ್ಸ್ ಸಾಂಘಿಕ ಹೋರಾಟ: ಹೈದ್ರಾಬಾದ್`ಗೆ ಮರ್ಮಾಘಾತ
ನವದೆಹಲಿ , ಮಂಗಳವಾರ, 2 ಮೇ 2017 (23:47 IST)
ದೆಹಲಿಯಲ್ಲಿ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ 6 ವಿಕೆಟ್`ಗಳ ಅಮೋಘ ಜಯ ದಾಖಲಿಸಿದೆ. ಈ ಮೂಲಕ ಪ್ಲೇಆಫ್ಸ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಗೆದ್ದ ಡೆಲ್ಲಿ ತಂಡ ಹೈದ್ರಾಬಾದ್`ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಯುವರಾಜ್ ಸಿಂಗ್ ಸಿಡಿಸಿದ 70 ರನ್`ಗಳ ನೆರವಿನಿಂದ ಹೈದ್ರಾಬಾದ್ ತಂಡ 185 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಈ ಹಿಂದಿನ ಪಂದ್ಯಗಳ ಕಳಪೆ ಬ್ಯಾಟಿಂಗ್ ಮೆಟ್ಟಿ ನಿಂತು ಹೋರಾಟ ನಡೆಸಿತು. ಟಾಪ್ 5 ಆಟಗಾರರು ಹೈದ್ರಾಬಾದ್ ವಿರುದ್ಧ ಸಾಂಘಿಕ ಹೋರಾಟ ನಡೆಸಿದರು. ಸಾಮ್ಸನ್ 24, ನಾಯರ್ 39, ರಿಶಬ್ ಪಂತ್ 34, ಶ್ರೇಯಸ್ ಅಯ್ಯರ್ 33, ಕೋರೆ ಅಂಡರ್ಸನ್ ಅಜೇಯ 41 ಮತ್ತು ಅಂತಿಮವಾಗಿ ಕ್ರಿಸ್ ಮೋರಿಸ್ 7 ಎಸೆತಗಳಲ್ಲಿ 15 ರನ್ ಸಿಡಿಸಿ ಗೆಲುವು ತಂದು ಕೊಟ್ಟರು. 19.1 ಓವರಿನಲ್ಲಿ ಡೆಲ್ಲಿ ಗೆಲುವಿನ ಗುರಿ ತಲುಪಿತು.

ಪ್ಲೇಆಫ್ಸ್ ತಲುಪಲು ಟೂರ್ನಿಯಲ್ಲಿ ಉಳಿದೆಲ್ಲ ಪಂದ್ಯ ಗೆಲ್ಲಲೇಬೇಕಾಗಿರುವ ಒತ್ತಡದಲ್ಲಿರುವ ಡೆಲ್ಲಿ ತಂಡ ಈ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಐಸಿಸಿ ಈವೆಂಟ್ ಗಳಿಂದಲೂ ಟೀಂ ಇಂಡಿಯಾ ಹಿಂದಕ್ಕೆ?