Daily Horoscope

ನಾಯಕನಾಗಿ ಮೊದಲ ಯತ್ನದಲ್ಲೇ ಮುಗ್ಗರಿಸಿದ ಕರುಣ್ ನಾಯರ್

Webdunia
ಭಾನುವಾರ, 30 ಏಪ್ರಿಲ್ 2017 (18:57 IST)
ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ನಾಯಕನಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಮುನ್ನಡೆಸಿದ ಕನ್ನಡಿಗ ಕರುಣ್ ನಾಯರ್ ಮೊದಲ ಯತ್ನದಲ್ಲೇ ಮುಗ್ಗರಿಸಿದ್ದಾರೆ. ಪಂಜಾಬ್ ವಿರುದ್ಧ ಡೆಲ್ಲಿ ತಂಡ 10 ವಿಕೆಟ್`ಗಳ ಹೀನಾಯ ಸೋಲು ಕಂಡಿದೆ.

ಟಾಸ್ ಗೆದ್ದರೂ ಪಂಜಾಬ್ ಕ್ಯಾಪ್ಟನ್ ಗ್ಲೇನ್ ಮ್ಯಾಕ್ಸ್ ವೆಲ್ ಡೆಲ್ಲಿಗೆ ಬ್ಯಾಟಿಂಗ್ ಅವಕಾಶ ಕೊಟ್ಟರು. ನಾಯಕನ ನಿರ್ಣಯವನ್ನ ಸಮರ್ಥಿಸಿದಂತೆ ಬೌಲ್ ಮಾಡಿದ ಪ್ರೀತಿ ಹುಡುಗರು ಕೇವಲ 67 ರನ್`ಗಳಿಗೆ ಡೆಲ್ಲಿ ತಂಡವನ್ನ ಕಟ್ಟಿಹಾಕಿದ್ದರು. 8 ಬ್ಯಾಟ್ಸ್`ಮನ್`ಗಳು ಎರಡಂಕಿ ದಾಟದೇ ಔಟಾಗಿದ್ದು ತಂಡಕ್ಕೆ ದುಬಾರಿಯಾಯ್ತು. ಸಂಜು ಸ್ಯಾಮ್ಸನ್, ನಾಯರ್, ಅಯ್ಯರ್, ಪಂತ್, ಬಿಲ್ಲಿಂಗ್ಸ್ ಯಾರೊಬ್ಬರೂ ಪಂಜಾಬ್ ದಾಳಿ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. 14 ರನ್`ಗೆ 4 ವಿಕೆಟ್ ಉರುಳಿಸಿದ ಸಂದೀಪ್ ಶರ್ಮಾ ಡೆಲ್ಲಿ ಬ್ಯಾಟಿಂಗ್ ಪಡೆಗೆ ಮುಳುವಾದರು. ಅತ್ಯುತ್ತಮ ಸಾಥ್ ನೀಡಿದ  ಅಕ್ಷರ್ ಪಟೇಲ್, ವರುಣ್ ಆರೋನ್ ತಲಾ 2 ವಿಕೆಟ್ ಪಡೆದರು.

ಕೇವಲ 68 ರನ್ ಗುರಿ ಬೆನ್ನತ್ತಿದ್ದ ಪಂಜಾಬ್7.5 ಓವರ್`ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ಗುರಿ ತಲುಪಿತು. ಈ ಸೋಲಿನಿಂದ ಡೆಲ್ಲಿಯ ಪ್ಲೇ ಆಫ್ಸ್ ಹಾದಿ ಕಠಿಣವಾಗಿದ್ದು, ಉಳಿದೆಲ್ಲ ಪಂದ್ಯಗಳನ್ನ ಗೆಲ್ಲೇಬೇಕಾಗಿದೆ. ಪಂದ್ಯದ ಬಳಿಕ ಮಾತನಾಡಿದ ಕೊಚ್ ರಾಹುಲ್ ದ್ರಾವಿಡ್ ಟೂರ್ನಿ ಆರಂಭದಿಂದಲೂ ತಮಡ ಎದುರಿಸಿದ ಗಾಯಾಳು ಸಮಸ್ಯೆ ಬಗ್ಗೆ ಪರಿಪೂರ್ಣ ತಂಡದೊಂದಿಗೆ ಕಣಕ್ಕಿಳಿಯಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments