Select Your Language

Notifications

webdunia
webdunia
webdunia
webdunia

ಎಸ್. ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಭೂತ ಯಾವತ್ತೂ ಬಿಡದು!

ಎಸ್. ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಭೂತ ಯಾವತ್ತೂ ಬಿಡದು!
Kocchi , ಬುಧವಾರ, 19 ಏಪ್ರಿಲ್ 2017 (08:44 IST)
ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತನಾಗಿದ್ದೇನೆ. ಇನ್ನಾದರೂ, ಆಡಲು ಅವಕಾಶ ಕೊಡಿ ಎಂದು ಅಂಗಲಾಚುತ್ತಿರುವ ಕೇರಳ ಕ್ರಿಕೆಟಿಗ ಶ್ರೀಶಾಂತ್ ಗೆ ಬಿಸಿಸಿಐ ಬಾಗಿಲು ಮುಚ್ಚಿದೆ.

 
ಬಿಸಿಸಿಐಗೆ ಮೊದಲು ಮನವಿ ಸಲ್ಲಿಸಿದ್ದ ಶ್ರೀಶಾಂತ್ ಯಾವುದೇ ಉತ್ತರ ಸಿಗದಿರುವ ಕಾರಣಕ್ಕೆ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಬಿಸಿಸಿಐಗೆ ಉತ್ತರಿಸುವಂತೆ ನೋಟೀಸ್ ನೀಡಿತ್ತು.

ಇದಕ್ಕೆ ಉತ್ತರಿಸಿದ ಬಿಸಿಸಿಐ ಯಾವುದೇ ಕಾರಣಕ್ಕೂ ಕ್ರಿಕೆಟಿಗನ ಮೇಲೆ ವಿಧಿಸಿದ ಅಜೀವ ನಿಷೇಧ ಶಿಕ್ಷೆ ಹಿಂಪಡೆಯಲಾಗುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. 2013 ರ ನಿರ್ಣಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಶಿಸ್ತು ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ. ಇದರೊಂದಿಗೆ ಶ್ರೀಶಾಂತ್ ಹಾದಿ ಮತ್ತಷ್ಟು ಕಷ್ಟಕರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಆರ್`ಸಿಬಿಗೆ ಇವತ್ತು ಡು ಆರ್ ಡೈ ಮ್ಯಾಚ್: ಸೋತರೆ ಪ್ಲೇಆಫ್ಸ್ ಕನಸು ಬಹುತೇಕ ಅಂತ್ಯ