ಮುಂಬೈ: ಐಪಿಎಲ್ ನಲ್ಲಿ ಈಗಷ್ಟೇ ಫಾರ್ಮ್ ಗೆ ಮರಳಲುತ್ತಿರುವ ಗುಜರಾತ್ ಲಯನ್ಸ್ ಗೆ ಕೊನೆಯ ಹಂತದಲ್ಲಿ ಆಘಾತದ ಸುದ್ದಿ ಬಂದಿದೆ. ಆರಂಭಿಕ ಬ್ರೆಂಡಮ್ ಮೆಕ್ಕಲಂ ಐಪಿಎಲ್ ನಿಂದ ಔಟ್ ಆಗಿದ್ದಾರೆ.
ಸ್ನಾಯು ಸೆಳೆತದಿಂದಾಗಿ ಮೆಕ್ಕಲಂ ಮುಂದಿನ ಪಂದ್ಯಗಳಿಂದ ಲಭ್ಯರಿರುವುದಿಲ್ಲ ಎಂದು ಗುಜರಾತ್ ತಂಡದ ಮೂಲಗಳು ಹೇಳಿವೆ. ಈ ಐಪಿಎಲ್ ಆವೃತ್ತಿಯಲ್ಲಿ ಬ್ರೆಂಡಮ್ ಗುಜರಾತ್ ಪರ ಹಲವು ಬಾರಿ ಉಪಯುಕ್ತ ಇನಿಂಗ್ಸ್ ಆಡಿದ್ದರು.
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆಡುವಾಗ ಬ್ರೆಂಡಮ್ ಗಾಯಗೊಂಡಿದ್ದರು. ಅವರ ಜತೆಗೆ ಲಯನ್ಸ್ ಆಟಗಾರ ನಾಥು ಸಿಂಗ್ ಕೂಡಾ ಗಾಯಗೊಂಡು ಹೊರಗುಳಿಯಲಿದ್ದಾರೆ.
ಈಗಾಗಲೇ ಗುಜರಾತ್ ಡ್ವಾನ್ ಬ್ರಾವೋ ಅವರನ್ನು ಗಾಯದ ಕಾರಣದಿಂದ ಕಳೆದುಕೊಂಡಿದೆ. ಆದರೆ 11 ಪಂದ್ಯಗಳಿಂದ 319 ರನ್ ಕಲೆ ಹಾಕಿರುವ ಬ್ರೆಂಡಮ್ ಗಾಯಗೊಂಡು ಹೊರ ಹೋಗುತ್ತಿರುವುದು ಗುಜರಾತ್ ತಂಡಕ್ಕೆ ತುಂಬಲಾರದ ನಷ್ಟವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ