ನವದೆಹಲಿ: ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯವಾಡಲು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಭುಜದ ನೋವಿನ ನೆಪ ಹೇಳಿ ತಪ್ಪಿಸಿಕೊಂಡರು ಎಂದಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಭಾರತೀಯರ ಕ್ಷಮೆ ಯಾಚಿಸಿದ್ದಾರೆ.
ಐಪಿಎಲ್ ನ ಗುಜರಾತ್ ತಂಡದ ಕೋಚ್ ಆಗಿರುವ ಹಾಗ್, ಇತ್ತೀಚೆಗಷ್ಟೇ ಕೊಹ್ಲಿ ಬಗ್ಗೆ ಕಾಮೆಂಟ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡ ಅವರು ಕೊಹ್ಲಿ ಮತ್ತು ಭಾರತೀಯರ ಕ್ಷಮೆ ಕೋರುವುದಾಗಿ ಹೇಳಿಕೊಂಡಿದ್ದಾರೆ.
‘ನನ್ನ ಉದ್ದೇಶ ಕೊಹ್ಲಿ ಅಥವಾ ಭಾರತೀಯ ಕ್ರಿಕೆಟಿಗರಿಗೆ ನೋವು ಉಂಟುಮಾಡುವುದಾಗಿರಲಿಲ್ಲ. ಐಪಿಎಲ್ ಪಂದ್ಯಾವಳಿಯನ್ನು ಅತ್ಯಂತ ಮಹತ್ವದ್ದು ಎಂದು ಪರಿಗಣಿಸಿ, ದುರುದ್ದೇಶವಿಲ್ಲದೇ ಈ ರೀತಿ ಹೇಳಿದ್ದೆ. ಇದರಿಂದ ನೋವಾಗಿದ್ದರೆ ಕ್ಷಮೆಯಿರಲಿ’ ಎಂದು ಹಾಗ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ