ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುಣೆ ಸೂಪರ್ ಜೈಂಟ್ ಗಳ ವಿರುದ್ಧ 27 ರನ್ ಗಳಿಂದ ಸೋತಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಟೀವ್ ಸ್ಮಿತ್ ಬಳಗ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳು ಉತ್ತಮ ರನ್ ಕಲೆ ಹಾಕಿದರೂ, ಅಂತ್ಯದಲ್ಲಿ ಪುಣೆ ಎಡವಿತು.
ಗೆಲುವಿನ ಬೆನ್ನತ್ತಿದ ಆರ್ ಸಿಬಿ ಪರ ನಾಯಕ ಕೊಹ್ಲಿ ಕೂಡಾ ನಿಂತು ಆಡದೇ ಇದ್ದುದರಿಂದ ತವರಿನಲ್ಲೇ ಮತ್ತೊಂದು ಸೋಲು ಕಾಣುವಂತಾಯಿತು. ಬೆಂಗಳೂರು ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ