Select Your Language

Notifications

webdunia
webdunia
webdunia
webdunia

ಬೌಂಡರಿ ತಡೆಯಲು ಡೈ ಹೊಡೆದ ಯಶಸ್ವಿ ಆಟಗಾರ ಐಪಿಎಲ್`ನಿಂದಲೇ ಔಟ್

ಬೌಂಡರಿ ತಡೆಯಲು ಡೈ ಹೊಡೆದ ಯಶಸ್ವಿ ಆಟಗಾರ ಐಪಿಎಲ್`ನಿಂದಲೇ ಔಟ್
ರಾಜ್ ಕೋಟ್ , ಸೋಮವಾರ, 1 ಮೇ 2017 (11:14 IST)
ಹ್ಯಾಟ್ರಿಕ್ ವಿಕೆಟ್, ಒಂದೇ ಪಂದ್ರದಲ್ಲಿ 5 ವಿಕೆಟ್ ಸೇರಿದಂತೆ ಟೂರ್ನಿಯಲ್ಲಿ 12 ವಿಕೆಟ್ ಪಡೆದು ಮಿಂಚುತ್ತಿದ್ದ ಗುಜರಾತ್ ಲಯನ್ಸ್`ನ ಯಶಸ್ವಿ ಬೌಲರ್ ಆಂಡ್ರ್ಯೂ ಟೈ ಟೂರ್ನಿಯಿಂದ ಹೊರಬಿದ್ದಿದ್ದಾರೆ.
 

ಮುಂಬೈ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯಲು ಡೈವ್ ಹೊಡೆದಾಗ ಟೈ ಗಾಯಗೊಂಡಿದ್ದರು. ಪರೀಕ್ಷೆ ವೇಳೆ ಆಂಡ್ರ್ಯ ಟೈ ಭುಗದ ಭಾಗದ ಸ್ಥಳಾಂತರಗೊಂಡಿರುವುದು ಬೆಳಕಿಗೆ ಬಂದಿದ್ದು, ಸೀಸನ್-10ರಿಂದಲೇ ಹೊರಬಿದ್ದಾರೆ.

ನನ್ನ ಭುಜ ಸಾಕೆಟ್`ನಿಂದ ಹೊರಬಂದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭುಜಕ್ಕೆ ಯಾವ ಮಟ್ಟಿನ ಹಾನಿಯಾಗಿದೆ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಮುಂದಿನ ಕೆಲ ದಿನಗಳಲ್ಲಿ ತವರಿಗೆ ವಾಪಸ್ ಆಗುತ್ತಿದ್ದೇನೆ. ಹೆಚ್ಚು ಹಾನಿ ಆಗದಿದ್ದರೆ ಸಾಕು ಎಂದು ಆಂಡ್ರ್ಯೂ ಟೈ ತಿಳಿಸಿದ್ದಾರೆ.

ಐಪಿಎಲ್`ನಲ್ಲಿ 6 ಪಂದ್ಯಗಳನ್ನಾಡಿರುವ ಆಂಡ್ರ್ಯೂ ಟೈ  12 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದರು. ಟೈ ಹೊರಬಿದ್ದಿರುವುದು ಗುಜರಾತ್ ಲಯನ್ಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಮಧ್ಯರಾತ್ರಿ ಗಿಫ್ಟ್ ತಂದವರು ಯಾರು?!