Select Your Language

Notifications

webdunia
webdunia
webdunia
webdunia

ಐಪಿಎಲ್`ನಲ್ಲಿ ಒಂದೇ ದಿನ 2 ಹ್ಯಾಟ್ರಿಕೆ ವಿಕೆಟ್ ದಾಖಲೆ

ಐಪಿಎಲ್`ನಲ್ಲಿ ಒಂದೇ ದಿನ 2 ಹ್ಯಾಟ್ರಿಕೆ ವಿಕೆಟ್ ದಾಖಲೆ
ಬೆಂಗಳೂರು , ಶನಿವಾರ, 15 ಏಪ್ರಿಲ್ 2017 (09:36 IST)
ವಿಶ್ವಾದ್ಯಂತ ಗಮನ ಸೆಳೆದಿರುವ ಐಪಿಎಲ್ ಕ್ರಿಕೆಟ್ ನಿನ್ನೆ ಒಂದು ವಿಶಿಷ್ಟ ದಾಖಲೆ ಮೂಲಕ ಗಮನ ಸೆಳೆದಿದೆ. ಬೇರೆ ಬೇರೆ ತಂಡಗಳ ಇಬ್ಬರು ಬೌಲರ್`ಗಳು ನಿನ್ನೆ ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಆರ್`ಸಿಬಿಯ ಸ್ಯಾಮುಯಲ್ ಬದ್ರಿ ಮತ್ತು ಗುಜರಾತ್ ಲಯನ್ಸ್`ನ ಆಂಡ್ರ್ಯೂ ಟೈ ಈ ವರ್ಷದ ಐಪಿಎಲ್`ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈಗೆ ಸ್ಯಾಮ್ಯುಯಲ್ ಬದ್ರಿ ಶಾಕ್: 143 ರನ್`ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್`ಗೆ ಆರ್`ಸಿಬಿಯ ಸ್ಯಾಮ್ಯುಯಲ್ ಬದ್ರಿ ಶಾಕ್ ನೀಡಿದರು. ಚಿನ್ನಸ್ವಾಮಿ ಪಿಚ್`ನಲ್ಲಿ ಸ್ಯಾಮ್ಯುಯಲ್ ಸ್ಪಿನ್ ಮೋಡಿಗೆ ಮುಂಬೈ ಬ್ಯಾಟ್ಸ್`ಮನ್`ಗಳ ಬಳಿ ಉತ್ತರವೇ ಇರಲಿಲ್ಲ. ಪಾರ್ಥಿವ್ ಪಟೇಲ್ ಮತ್ತು ರಾಣಾರನ್ನ ಕ್ಯಾಚ್ ಬಲೆಗೆ ಕೆಡವಿದ ಬದ್ರಿ, ರೋಹಿತ್ ಶರ್ಮಾರನ್ನ ಕ್ಲೀನ್ ಬೌಲ್ಡ್ ಮಾಡಿದರು.

ಐಪಿಎಲ್`ಗೆ ಎಂಟ್ರಿಕೊಟ್ಟ ಪಂದ್ಯದಲ್ಲೇ ಟೈ ಕಮಾಲ್: ಗುಜರಾತ್ ಮೂಲಕ ಐಪಿಎಲ್ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆಂಡ್ರ್ಯೂ ಟೈ ಕಮಾಲ್ ಮಾಡಿದರು. 3 ಎಸೆತಗಳಲ್ಲಿ ಪುಣೆಯ ತಿವಾರಿ, ಸ್ಟೋಕ್ಸ್, ತ್ರಿಪಾಠಿಗೆ ಪೆವಿಲಿಯನ್ ದಾರಿ ತೋರಿಸಿದ ಟೈ ಹ್ಯಾಟ್ರಿಕ್ ಸಾಧನೆ ಮೆರೆದರು. ಈ ಪಂದ್ಯದಲ್ಲಿ 4 ಓವರ್`ಗಳಲ್ಲಿ ಟೈ 17 ರನ್ ನೀಡಿ 5 ವಿಕೆಟ್ ಪಡೆದರು.
ಐಪಿಎಲ್`ನಲ್ಲಿ ಹ್ಯಾಟ್ರಿಕ್ ವಿಕೆಟ್ ಇದೇ ಮೊದಲಲ್ಲ. 14 ಬೌಲರ್`ಗಳು ಇದುವರೆಗೆ ಹ್ಯಾಟ್ರಿಕ್ ಪಡೆದಿದ್ದಾರೆ.

 
webdunia

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬಂದರೂ ನಡೆಯದ ಮ್ಯಾಜಿಕ್