ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ, ದೆಹಲಿ ಮೂಲದ ಆಟಗಾರರು. ಆಗಾಗ ಮೈದಾನದಲ್ಲಿ ಮಾತಿನ ಚಕಮಕಿ ನಡೆಸುತ್ತಾ ಸುದ್ದಿಯಾಗುತ್ತಾರೆ. ಹಾಗಾಗಿ ಗಂಭೀರ್ ಅದಕ್ಕೆ ಹೊಸದೊಂದು ವ್ಯಾಖ್ಯಾನ ನೀಡಿದ್ದಾರೆ.
ನಮ್ಮಿಬ್ಬರನ್ನು ನೋಡಿದರೆ ಗೊತ್ತಾಗಲ್ವಾ? ದೆಹಲಿ ಮೂಲದ ಆಟಗಾರರು ಎಷ್ಟು ಕೋಪಿಷ್ಟರು ಎಂಬುದನ್ನು ಎಂದು ಗಂಭೀರ್ ಪ್ರಶ್ನಿಸಿದ್ದಾರೆ. ಸಂದರ್ಶನವೊಂದರಲ್ಲಿ ಗಂಭೀರ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ಬೇಗನೇ ಸಿಟ್ಟುಗೊಳ್ಳುವ ಗಂಭೀರ್ ಹಲವು ಬಾರಿ ಮೈದಾನದಲ್ಲಿ ಬೇರೆ ಆಟಗಾರರ ಜತೆ ಮಾತಿನ ಚಕಮಕಿ ನಡೆಸಿ ಸುದ್ದಿಯಾಗಿದ್ದರು. ಇಷ್ಟೆಲ್ಲಾ ಕೋಪಿಷ್ಠನಾದರೂ, ಗಂಭೀರ್ ತಮ್ಮ ಮಗಳ ಜತೆ ಆಡುತ್ತಿದ್ದರೆ ಐಸ್ ಕ್ರೀಂ ನಂತೆ ಕರಗುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ