Select Your Language

Notifications

webdunia
webdunia
webdunia
webdunia

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ
ಚೆನ್ನೈ , ಗುರುವಾರ, 16 ಮಾರ್ಚ್ 2017 (20:02 IST)
ಮಹಿಳಾ ಇತಿಹಾಸ ಮಾಸ ಅಂಗವಾಗಿ ಅಮೆರಿಕ ರಾಯಭಾರಿ ಕಚೇರಿ, ರೆಡ್ ಎಲೆಫೆಂಟ್ ಫೌಂಡೇಶನ್ ಸಹಭಾಗಿತ್ವದಲ್ಲಿ ಫೆಮೋಸೈಕ್ಲೋಪಿಡಿಯಾ ಎನ್ನುವ ಶೀರ್ಷಿಕೆಯಡಿ ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.
"ಫೆಮೋಸೈಕ್ಲೋಪಿಡಿಯಾ" ಪ್ರದರ್ಶನದಲ್ಲಿ ದಿ ರೆಡ್ ಎಲೆಫೆಂಟ್ ಫೌಂಡೇಶನ್ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಕೀರ್ತಿ ಜಯಕುಮಾರ್ ಮೇಲ್ವಿಚಾರಣೆಯಲ್ಲಿ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ರಚಿಸಲಾದ ಭಾರತೀಯ ಮತ್ತು ಅಮೆರಿಕದ 30 ಜೋಡಿ ಭಾವಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.
 
ಅಮೆರಿಕ ರಾಯಭಾರಿ ಕಚೇರಿಯಲ್ಲಿರುವ ಅಮೆರಿಕನ್ ಸೆಂಟರ್‌ನಲ್ಲಿ ಸಾರ್ವಜನಿಕರು ಪ್ರದರ್ಶನವನ್ನು ಸೋಮುವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದ್ದು ಮಾರ್ಚ್ 31 ರವರೆಗೆ ವೀಕ್ಷಿಸಬಹುದಾಗಿದೆ. 
 
ಪ್ರತಿ ವರ್ಷ ಅಮೆರಿಕದಲ್ಲಿ ಮಾರ್ಚ್ ತಿಂಗಳಲ್ಲಿ ಮಹಿಳಾ ಇತಿಹಾಸ ಮಾಸ ಆಚರಿಸಲಾಗುತ್ತದೆ. ಮಹಿಳಾ ಇತಿಹಾಸ ಮಾಸ ಕುರಿತಂತೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್, ಅಗಾಧ ತಡೆಗೋಡೆಗಳನ್ನು ದಾಟಿ ಮೇಲುಗೈ ಸಾಧಿಸಿ ಅಮೆರಿಕ ಜೀವನಕ್ಕೆ ಹೊಸ ಆಕಾರ ನೀಡಿ, ಗಮನಾರ್ಹ ಸಾಧನೆಗೈದ ಮಹಿಳೆಯರಿಗೆ ಗೌರವ ಸಲ್ಲಿಸುತ್ತೇವೆ. ಅಮೇರಿಕಾ ದೇಶ ಜಗತ್ತಿನ ಮಹಿಳೆಯರ ಹಕ್ಕು ಮತ್ತು ಸಮಾನತೆಯ ಹೋರಾಟ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸಂಜೆ 5 ಗಂಟೆಗೆ ಉತ್ತರಪ್ರದೇಶದ ನೂತನ ಸಿಎಂ ಆಯ್ಕೆ