Select Your Language

Notifications

webdunia
webdunia
webdunia
webdunia

ಸ್ಮಾರ್ಟ್ ಫೋನ್`ನಲ್ಲಿ ಪೋರ್ನ್ ನೋಡಿದರೆ ಹಳ್ಳಕ್ಕೆ ಬೀಳೋದು ಗ್ಯಾರಂಟಿ..!

ಸ್ಮಾರ್ಟ್ ಫೋನ್`ನಲ್ಲಿ ಪೋರ್ನ್ ನೋಡಿದರೆ ಹಳ್ಳಕ್ಕೆ ಬೀಳೋದು ಗ್ಯಾರಂಟಿ..!
ಲಂಡನ್ , ಮಂಗಳವಾರ, 5 ಸೆಪ್ಟಂಬರ್ 2017 (17:48 IST)
ಸ್ಮಾರ್ಟ್ ಫೋನ್ ಯಾವುದೇ ಕಂಪ್ಯೂಟರ್`ಗೂ ಕಡಿಮೆ ಇಲ್ಲ. ಕೂತಲ್ಲಿಯೇ ಬೇಕಾದನ್ನ ಸರ್ಚ್ ಮಾಡಿ ಪಡೆಯಬಹುದು. ಉಪಯುಕ್ತ ಮಾಹಿತಿಗಳ ಜೊತೆ ಸ್ಮಾರ್ಟ್ ಫೋನ್`ಗಳಲ್ಲಿ ಪೋರ್ನ್ ಮೂವಿ ನೋಡುವವರ ಸಂಖ್ಯೆಯೂ ಹೆಚ್ಚಿದೆ. ಸ್ಮಾರ್ಟ್ ಫೋನ್`ಗಳಲ್ಲಿ ಪೋರ್ನ್ ಮೂವಿ ನೋಡುವವರಿಗೊಂದು ಆಘಾತಕಾರಿ ಸುದ್ದಿ ಬಂದಿದೆ.

ಆನ್ ಲೈನ್ ಭದ್ರತಾ ಸಂಸ್ಥೆ ವಂಡೇರ ನೀಡಿರುವ ವರದಿಗಳ ಪ್ರಕಾರ, ಡೆಸ್ಕ್ ಟಾಪ್ ಕಂಪ್ಯೂಟರ್`ಗಳಿಗಿಂತಲೂ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್`ಗಳಲ್ಲಿ ಪೋರ್ನ್ ಮೂವಿ ನೋಡುವವರು ಅತ್ಯಂತ ಅಪಾಯದಲ್ಲಿದ್ದಾರೆ ಎನ್ನುತ್ತಿದೆ ಸಂಸ್ಥೆ. ಸ್ಮಾರ್ಟ್ ಫೋನ್`ಗಳ ಭದ್ರತಾ ಫೀಚರ್`ಗಳು ಅಷ್ಟು ಪ್ರಭಾವವಾಗಿರುವುದಿಲ್ಲ. ಹೀಗಾಗಿ, ಪೋರ್ನ್ ಮೂವಿ ನೋಡುವಾಗ ನಿಮ್ಮ ವೈಯಕ್ತಿಕ ದಾಖಲೆಗಳನ್ನ ಕದಿಯುವ ಸಾಧ್ಯತೆ ಹೆಚ್ಚಿದೆ ಅನ್ನುತ್ತೆ ಸಂಸ್ಥೆ.

ಪೋರ್ನ್ ವಿಡಿಯೋಗಳ ಜೊತೆ ಕೆಲ ಮಾಲ್ವೇರ್`ಗಳನ್ನ ತೇಲಿಬಿಡಲಾಗುತ್ತಿದ್ದು, ಅವುಗಳು ಸ್ಮಾರ್ಟ್ ಫೋನ್ ಬಳಕೆದಾರರ ಮಾಹಿತಿ ಕದಿಯುತ್ತವೆಯಂತೆ. ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಂ ಅದರಲ್ಲೂ ಪ್ರಮುಖವಾಗಿ ಆಂಡ್ರಾಯ್ಡ್`ಗಳು ಡೆಸ್ಕ್ ಟಾಪ್`ಗಳಷ್ಟು ಸೆಕ್ಯೂರ್ ಅಲ್ಲ. ಸ್ಮಾರ್ಟ್ ಫೋನ್`ನಲ್ಲಿರುವ ದೌರ್ಬಲ್ಯಗಳಿಂದಾಗಿ ಹ್ಯಾಕರ್`ಗಳು ಸುಲಭವಾಗಿ ನಿಮ್ಮ ವಯಯಕ್ತಿಕ ಮಾಹಿತಿ ಕದಿಯಬಹುದಂತೆ.

50 ಅಡಲ್ಟ್ ಸೈಟ್`ಗಳ ಪೈಕಿ 40 ಸೈಟ್`ಗಳಲ್ಲಿ ಮಾಲ್ವೇರ್`ಗಳ ಬಳಕೆ ಇದ್ದು, 800,000 ಬಳಕೆದಾರರ ಮಾಹಿತಿ ಕದ್ದಿವೆ ಎನ್ನುವುದನ್ನ ಸಂಸ್ಥೆ.ಬಹಿರಂಗಪಡಿಸಿದೆ. ಜೊತೆಗೆ 400 ಮಿಲಿಯನ್ ಖಾತೆಗಳಿಗೆ ಈ ಮಾಲ್ವೇರ್`ಗಳು ಲಗ್ಗೆ ಇಟ್ಟು ಮಾಹಿತಿ ಕದ್ದಿವೆ ಎನ್ನುತ್ತಿದೆ ಸಂಸ್ಥೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಕೇಸ್ ಸಿಬಿಐಗೆ: ಸುಪ್ರೀಂಕೋರ್ಟ್ ಆದೇಶ ಪರಿಶೀಲಿಸಿ ಪ್ರತಿಕ್ರಿಯೆ ಎಂದ ಸಿಎಂ