ಶೌಚಾಲಯಕ್ಕೆ ಹೋಗಗೊಡಲಿಲ್ಲವೆಂದು ಸಿಟ್ಟಾದ ಮಹಿಳೆಯೋರ್ವಳು ಶಾಪ್ ಕೌಂಟರ್‌ನಲ್ಲಿಯೇ ಕುಳಿತು ಮೂತ್ರ ಮಾಡಿ ಅದನ್ನು ಕುಡಿಯುವ ಮೂಲಕ ಪ್ರತಿಭಟಿಸಿದ ವಿಲಕ್ಷಣ, ಕೇಳೋಕೆ ಅಸಹ್ಯವೆನಿಸುವ ಘಟನೆ ದಕ್ಷಿಣ ತೈವಾನ್‍ನ ಕೌಸಿಯಾಂಗ್‍ನಲ್ಲಿ ನಡೆದಿದೆ.
ಪ್ರಖ್ಯಾತ ಜಪಾನಿ ಕಾರ್ನರ್ ಶಾಪ್ - ಫ್ಯಾಮಿಲಿ ಮಾರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿಗೆ ಬಂದ ಯುವತಿ ತನಗೆ ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ. ಆದರೆ ಅವರದಕ್ಕೆ ಅನುಮತಿ ನೀಡಿಲ್ಲ. ಇದರಿಂದ ಕೋಪಗೊಂಡ ಆಕೆ ಕೌಂಟರ್ ಟೇಬಲ್ ಏರಿ ಪ್ಯಾಂಟ್ ಕಳಚಲು ಪ್ರಾರಂಭಿಸಿದ್ದಾಳೆ. ಇದನ್ನು ತಡೆಯಲು ಸಿಬ್ಬಂದಿ ಪ್ರಯತ್ನಿಸಿದರಾದರೂ ಅದಕ್ಕವಳು ಕ್ಯಾರೇ ಎಂದಿಲ್ಲ. ಪೇಪರ್ ಕಪ್‌ವೊಂದರಲ್ಲಿ ಮೂತ್ರ ಮಾಡಿದ್ದಾಳೆ. ಅದಾದ ಮೇಲೆ ನಡೆದದ್ದು ಸಿಬ್ಬಂದಿಗಳನ್ನು ಮತ್ತೂ ಹೆಚ್ಚು ದಂಗು ಬಡಿಯುವಂತೆ ಮಾಡಿದೆ. ಕಪ್‌ನಲ್ಲಿದ್ದ ತನ್ನ ಮೂತ್ರವನ್ನು ಗಟಗಟನೆ ಕುಡಿದಿದ್ದಾಳೆ. ಈ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾಳೆ.
ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿದ್ದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದೆ.ನೀನು ಶೌಚಾಲಯ ಬಳಸಬೇಕೆಂದಿದ್ದರೆ ಅಲ್ಲಿಗೆ ಹೋಗಬೇಕಾದ ದಾರಿ ತೋರಿಸುತ್ತೇನೆ. ಮೂರ್ಖತನದ ಕೆಲಸವನ್ನು ಮಾಡಬೇಡ, ಕೆಳಗಿಳಿ ಎಂದು ಸಿಬ್ಬಂದಿ ಕಿರುಚುತ್ತಿರುವುದು ವಿಡಿಯೋದಲ್ಲಿ ಕೇಳುತ್ತಿದೆ.
ಇದಾದ ಬಳಿಕ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಹಿಳೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.
ವಿಡಿಯೋ: ಕೌಂಟರ್‌ಲ್ಲೇ ಮೂತ್ರ ಮಾಡಿ ಗಟಗಟನೆ ಕುಡಿದಳು