Select Your Language

Notifications

webdunia
webdunia
webdunia
webdunia

ಹಫೀಜ್ ಸಯೀದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪಾಕ್ ಸಂಸದನ ಪ್ರಶ್ನೆ

ಹಫೀಜ್ ಸಯೀದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪಾಕ್ ಸಂಸದನ ಪ್ರಶ್ನೆ
ಇಸ್ಲಾಮಾಬಾದ್ , ಶುಕ್ರವಾರ, 7 ಅಕ್ಟೋಬರ್ 2016 (18:13 IST)
ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಆಂತರಿಕವಾಗಿಯೇ ವಿರೋಧ ವ್ಯಕ್ತವಾಗುತ್ತಿದೆ. ಮತ್ತೀಗ ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್(ಪಿಎಮ್ಎಲ್-ಎನ್) ಸಂಸದ ರಾಣಾ ಮುಹಮ್ಮದ್ ಅಫ್ಜಲ್ ಜಮಾತ್-ಉಗ್-ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ದೇಶದಲ್ಲಿ ಏಳುತ್ತಿರುವ ಧ್ವನಿಗೆ ಕೋರಸ್ ನೀಡಿದ್ದಾನೆ. 

ವಿದೇಶಿ ವ್ಯವಹಾರಗಳ ಮೇಲೆ ಸ್ಥಾಯಿ ಸಮಿತಿಯ ಸಭೆಯಲ್ಲಿ, ಸರ್ಕಾರ ಸಯೀದ್ ಬಂಧನಕ್ಕೆ ವಿಫಲವಾಗಿರುವುದನ್ನು ಪ್ರಶ್ನಿಸಿರುವ ಅವರು, ಹಫೀಜ್ ನಮಗಾಗಿ ಯಾವ ಮೊಟ್ಟೆ ಇಡುತ್ತಿದ್ದಾನೆ ಎಂದು ಆತನನ್ನು ಪೋಷಿಸಲಾಗುತ್ತಿದೆ ಎಂದು ಸವಾಲೆಸೆದಿದ್ದಾರೆ. 
 
ಸಂಸದೀಯ ಸಮಿತಿಯ ಸದಸ್ಯರಾಗಿರುವ ಅಫ್ಜಲ್ ಪಾಕಿಸ್ತಾನದ ವಿದೇಶಾಂಗ ನೀತಿಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದು, "ನಮಗೆ ಇದುವರೆಗೆ ಹಫೀಜ್ ಸಯೀದ್ ತೊಡೆದುಹಾಕಲು ಸಾಧ್ಯವಾಗಿಲ್ಲ", ಎಂದು ಹೇಳಿದ್ದಾರೆ. 
 
ಭಾರತದ ಮೋಸ್ಟ್ ವಾಟೆಂಡ್ ಉಗ್ರರಲ್ಲಿ ಒಬ್ಬನಾಗಿರುವ ಸಯೀದ್, 166 ಜನರನ್ನು ಬಲಿ ಪಡೆದುಕೊಂಡ 2008ರ ಮುಂಬೈ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಅನೇಕ ವಿಧ್ವಂಸಕಾರಿ ಕೃತ್ಯಗಳ ರೂವಾರಿ ಎನಿಸಿಕೊಂಡಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ