Select Your Language

Notifications

webdunia
webdunia
webdunia
webdunia

ಬಸ್ ಬಿಡುವ ಆಸೆಯಿಂದ ಈ ಪೋರ ಮಾಡಿದ್ದೇನು ಗೊತ್ತಾ?!

ಬಸ್ ಬಿಡುವ ಆಸೆಯಿಂದ ಈ ಪೋರ ಮಾಡಿದ್ದೇನು ಗೊತ್ತಾ?!
Beijing , ಬುಧವಾರ, 5 ಜುಲೈ 2017 (09:06 IST)
ಬೀಜಿಂಗ್: ಮಕ್ಕಳಿಗೆ ಏನೆಲ್ಲಾ ಆಸೆ ಇರುತ್ತದೆ ನೋಡಿ. ಹಾಗೇ ಈ ಬಾಲಕನಿಗೂ ಒಂದು ಆಸೆಯಿತ್ತು. ಅದು ಬಸ್ ಬಿಡಬೇಕೆಂದು. ಅದಕ್ಕಾಗಿ ಈ 12 ವರ್ಷದ ಬಾಲಕ ಹಿಡಿದ ದಾರಿ ಮಾತ್ರ ಬೆರಗಾಗುವಂತದ್ದು.


ಇದು ನಡೆದಿದ್ದು ಚೀನಾ ಗಾಂಗ್ ಜೂ ಎಂಬಲ್ಲಿ. 12 ವರ್ಷದ ಬಾಲಕ ಬಸ್ ಬಿಡುವ ಆಸೆ ತಡೆಯಲಾಗದೆ ಒಂದು ಬಸ್ ಕದ್ದಿದ್ದಲ್ಲದೆ, ಸುಮಾರು 40 ನಿಮಿಷ ಎಲ್ಲರೂ ಓಡಾಡುವ ಬ್ಯುಸಿ ರಸ್ತೆಯಲ್ಲಿ ಬಸ್ ಓಡಿಸಿ ಆಸೆ ತೀರಿಸಿಕೊಂಡಿದ್ದಾನೆ. ಈತನನ್ನು ನೋಡಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಆದರೆ ಪೊಲೀಸರು ಬಂದು ಈತನನ್ನು ಹಿಡಿಯುವಷ್ಟರಲ್ಲಿ ಬಾಲಕನಿಗೆ 40 ನಿಮಿಷಗಳ ಕಾಲ ಸುಮಾರು 10 ಕಿ.ಮೀ. ದೂರ ಬಸ್ ಓಡಿಸಿಯಾಗಿತ್ತು. ಬಸ್ ನಲ್ಲಿದ್ದ ಜಿಪಿಎಸ್ ವ್ಯವಸ್ಥೆಯಿಂದಾಗಿ ಬಾಲಕನನ್ನು ಹಿಡಿಯಲು ಪೊಲೀಸರಿಗೆ ಸಹಾಯವಾಯಿತು. ಅಂದ ಹಾಗೆ ಅಷ್ಟು ದೂರ ಓಡಿಸಿಯೂ ಈ ಬಾಲಕ ಯಾರಿಗೂ ಯಾವುದೇ ಅಪಾಯ ಮಾಡಿಕೊಳ್ಳಲಿಲ್ಲ ಎನ್ನುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್ ನಲ್ಲಿ ಹೂವಿಗೂ ಮೋದಿ ಹೆಸರು