Webdunia - Bharat's app for daily news and videos

Install App

ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ- ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್

Webdunia
ಮಂಗಳವಾರ, 17 ಜನವರಿ 2023 (17:54 IST)
ಕಾಶ್ಮೀರದಂತಹ ಜ್ವಲಂತ ಸಮಸ್ಯೆ ಪರಿಹರಿಸಲು ನಾವು ಗಂಭೀರ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸೋಣವೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂದೇಶ ನೀಡಿದ್ದಾರೆ. ಪಾಕಿಸ್ತಾನದ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯವರಾಗಿದ್ದು, ಪರಸ್ಪರ ಅರ್ಥೈಸಿಕೊಂಡು ಬಾಳಬೇಕು ಎಂದು ಹೇಳಿದ್ದಾರೆ. ‘ನಾವು ಶಾಂತಿ ಮತ್ತು ಪ್ರಗತಿಗಾಗಿ ಬದುಕುತ್ತೇವೆಯೇ ಅಥವಾ ನಾವು ಜಗಳವಾಡುತ್ತೇವೆಯೇ? ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತೇವೆಯೇ ಎಂಬುದು ನಮಗೆ ಬಿಟ್ಟಿದ್ದು. ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದರಿಂದ ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ’ ಎಂದು ಅವರು ಹೇಳಿದ್ದಾರೆ. ನಮ್ಮಲ್ಲಿ ಎಂಜಿನಿಯರ್‌ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರಿದ್ದಾರೆ. ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ”ಎಂದು ಷರೀಫ್ ಹೇಳಿದರು. ನಾವು ಹಿಂದೆ ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದು, ಶಾಂತಿಯಿಂದ ಬದುಕಲು ಬಯಸುತ್ತೇವೆ. ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಯವರಿಗೆ ನೀಡಲು ಬಯಸುವ ಸಂದೇಶ’ವೆಂದು ಅವರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಸಿಎನ್ ಮಂಜುನಾಥ್ ಪ್ರಕಾರ ಮೊಬೈಲ್ ಎಲ್ಲಿ ಇಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಮುಂದಿನ ಸುದ್ದಿ
Show comments