Select Your Language

Notifications

webdunia
webdunia
webdunia
webdunia

ವಿಡಿಯೋ ನೋಡಿ: ಟ್ರಾಫಿಕ್ ಮಧ್ಯೆ ಆಟಿಕೆ ಕಾರ್ ಓಡಿಸಿದ 1 ವರ್ಷದ ಮಗು

ವಿಡಿಯೋ ನೋಡಿ: ಟ್ರಾಫಿಕ್ ಮಧ್ಯೆ ಆಟಿಕೆ ಕಾರ್ ಓಡಿಸಿದ 1 ವರ್ಷದ ಮಗು
ಬೀಜಿಂಗ್ , ಬುಧವಾರ, 2 ನವೆಂಬರ್ 2016 (15:50 IST)
ಮನೆ ಮುಂದೆ ಆಟಿಕೆ ಕಾರ್ ಓಡಿಸುವ ಮಗು ಟ್ರಾಫಿಕ್ ಮಧ್ಯೆ ಹೋದರೆ ಏನಾಗಬೇಡಾ? ಹೌದು ಚೀನಾದಲ್ಲಿ ಈ ಘಟನೆ ನಡೆದಿದ್ದು ಮಗುವೊಂದು ಕಾರ್ ಓಡಿಸುತ್ತ ರಸ್ತೆಗಿಳಿದಿದೆ. ಪ್ರವಾಹೋಪಾದಿಯಲ್ಲಿ ಸಾಗುತ್ತಿದ್ದ ವಾಹನಗಳ ಮಧ್ಯೆ ತನ್ನ ಕಾರ್ ಜತೆ ಸಾಗಿದೆ. ಆದರೆ ಯಾರು ಕೂಡ ಕ್ಯಾರೇ ಅಂದಿಲ್ಲ. ಕೊನೆಗೆ ಸಂಚಾರಿ ಪೊಲೀಸ್ ರಸ್ತೆ ಮಧ್ಯೆ ಬಂದು ಮಗು ಮತ್ತು ಅದರ ಕಾರ್ ಎತ್ತಿಕೊಂಡು ರಸ್ತೆ ಬದಿ ತೆರಳಿದ್ದಾನೆ.

 
ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಕೇಳಿದಾಗ ಅಮ್ಮನನ್ನು ಹುಡುಕುತ್ತಾ ಬಂದಿದೆ ಎಂದಿದೆ ಮಗು. ಕೊನೆಗೂ ಮಗುವನ್ನು ತಾಯಿ ಬಳಿ ಸೇರಿಸಲಾಗಿದೆ. 
 
ಬೀಜಿಂಗ್: ಪುಟ್ಟ ಮಕ್ಕಳು ಆಟವಾಡುವಾಗ ಅಪ್ಪಿ ತಪ್ಪಿ ರಸ್ತೆಗೆ ಬಂದ್ರೆ ಸಾರ್ವಜನಿಕರು ಮಗುವನ್ನ ಸುರಕ್ಷಿತ ಸ್ಥಳಕ್ಕೆ ಬಿಡ್ತಾರೆ ಅಥವಾ ಅದರ ಪೋಷಕರು ಕಂಡ್ರೆ ಅವರ ಕೈಗೊಪ್ಪಿಸಿ ಮಗುವನ್ನ ಹುಷಾರಾಗಿ ನೋಡ್ಕೊಳ್ಳಿ ಅಂತ ಬುದ್ಧಿ ಹೇಳ್ತಾರೆ. ಆದ್ರೆ ಚೀನಾದಲ್ಲಿ ನಡೆದ ಘಟನೆ ಇದಕ್ಕೆ ಅಪವಾದ.
 
ಹಾಲುಗಲ್ಲದ ಮಗುವಿನ ಈ ಮುಗ್ಧ ಸಾಹಸ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಮೈ ಜುಮ್ಮನಿಸುವ ವಿಡಿಯೋವನ್ನು ನೀವು ಒಮ್ಮೆ ನೋಡಿ.
  ವಿಡಿಯೋ ನೋಡಿ: ಟ್ರಾಫಿಕ್ ಮಧ್ಯೆ ಆಟಿಕೆ ಕಾರ್ ಓಡಿಸಿದ 1 ವರ್ಷದ ಮಗು
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಒಆರ್‌ಒಪಿ ಯೋಧನ ಆತ್ಮಹತ್ಯೆ: ಮೋದಿಯಿಂದ ಸರ್ವಾಧಿಕಾರಿ ಧೋರಣೆ ಎಂದ ರಾಹುಲ್