ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದಿಲ್ಲ. ಒಂದು ವೇಳೆ ಯುದ್ಧ ಮಾಡಿದರೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುತ್ತೇವೆ ಎನ್ನುವುದು ಭಾರತದ ಭ್ರಮೆಯಾಗಿದೆ ಎಂದು ಪಾಕಿಸ್ತಾನದ ರಾಯಭಾರಿಗಳು ಹೇಳಿದ್ದಾರೆ.
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆಸಿದ ಉಗ್ರರ ಹಿಂದಿರುವ ಶಕ್ತಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಪಾಕ್, ಭಾರತ, ಪಾಕಿಸ್ತಾನದೊಂದಿಗೆ ಯುದ್ಧ ಮಾಡಲು ಸಾಧ್ಯವೇ ಇಲ್ಲ ಎಂದಿದೆ.
ಯುದ್ಧ ದೇಶದ ಆರ್ಥಿಕತೆಯನ್ನು ಹಾಳು ಮಾಡುವುದರಿಂದ ಯಾವ ದೇಶಕ್ಕೂ ಯುದ್ಧ ಬೇಕಾಗಿಲ್ಲ. ನಮಗೂ ಯದ್ಧ ಬೇಕಾಗಿಲ್ಲ. ಭಾರತ ನಮ್ಮ ಮೇಲೆ ಯುದ್ಧ ಹೇರುವುದಿಲ್ಲ ಎನ್ನುವುದು ಖಚಿತವಾಗಿದೆ ಎಂದು ಪಾಕ್ ರಾಯಭಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಮೇಲೆ ಪದೇ ಪದೇ ನಡೆಯುತ್ತಿರುವ ಉಗ್ರರ ದಾಳಿ ದೇಶಾದ್ಯಂತ ಜನತೆಯಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ ಭೂಪುಟದಿಂದಲೇ ಅಳಿಸಿಹಾಕಬೇಕು ಎನ್ನುವುದು ಜನತೆಯ ಅಭಿಪ್ರಾಯವಾಗಿದೆ.
ಕಳೆದ ಎರಡು ಬಾರಿ ಭಾರತದ ವಿರುದ್ಧ ಯುದ್ಧದಲ್ಲಿ ಸೋತ ಪಾಕಿಸ್ತಾನಕ್ಕೆ ಮುಂಬರುವ ದಿನಗಳಲ್ಲಿಯಾದರೂ ತಕ್ಕ ಪಾಠ ಕಲಿಸಬೇಕು ಎನ್ನುವುದು ಮೃತ ಯೋಧರ ಕುಟುಂಬಗಳ ಆಕ್ರೋಶವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ