Select Your Language

Notifications

webdunia
webdunia
webdunia
webdunia

ಯಾವಾಗ ಬಂದು ಕೊಲ್ಲುತ್ತಾರೆ ಎಂದು ಕಾದಿರುವೆ: ಆಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್!

Taliban Afghanistan
bengaluru , ಮಂಗಳವಾರ, 17 ಆಗಸ್ಟ್ 2021 (17:08 IST)
ತಾಲಿಬಾನ್ ಕಡೆಯವರು ಯಾವಾಗ ಬಂದು ನನ್ನ ಕೊಲ್ಲುತ್ತಾರೆ ಎಂದು ಕಾದು ಕುಳಿತಿರುವೆ ಎಂದು ಆಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜಫ್ರಿಯಾ ಘಫಾರಿ ಹೇ
ಳಿದ್ದಾರೆ.
ತಾಲಿಬಾಬ್ ಉಗ್ರರು ಆಫ್ಘಾನಿಸ್ತಾನವನ್ನು ಪೂರ್ಣ ವಶಪಡಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಹಾಯಕ್ಕೆ ಯಾರೂ ಬರುವುದಿಲ್ಲ ಎಂಬುದು ಗೊತ್ತಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ ಎಂಬುದು ತಿಳಿದಿದೆ. ಹಾಗಾಗಿ ನಾನು ಮತ್ತು ನನ್ನ ಪತಿ ತಾಲಿಬಾನಿಗಳು ಯಾವಾಗ ಬಂದು ಕೊಲ್ಲುತ್ತಾರೆ ಎಂದು ಕಾದು ಕುಳಿತಿದ್ದೇವೆ ಎಂದರು.
ಅಧ್ಯಕ್ಷ ಆಶ್ರಫ್ ಘಾನಿ ವಿದೇಶಕ್ಕೆ ಪಲಾಯಾನ ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ 27 ವರ್ಷದ ಜಫ್ರಿಯಾ ಘಫಾರಿ, ನಾನು ಎಲ್ಲಿಗೆ ಓಡಿ ಹೋಗಲಿ? ಜನರ ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿ ಇದ್ದೆವು. ಅದು ಈಗ ನಾಶವಾಯಿತು ಎಂದು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

65 ವರ್ಷದ ವೃದ್ದೆ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ!