Select Your Language

Notifications

webdunia
webdunia
webdunia
webdunia

11 ಸಾವಿರ ಜಾಬ್ ಕಟ್ಗೆ ವೊಡಾಫೋನ್ ಪ್ಲ್ಯಾನ್

11 ಸಾವಿರ ಜಾಬ್ ಕಟ್ಗೆ ವೊಡಾಫೋನ್ ಪ್ಲ್ಯಾನ್
ಲಂಡನ್ , ಗುರುವಾರ, 18 ಮೇ 2023 (10:22 IST)
ಲಂಡನ್ : ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ನಡೆಯುತ್ತಲೇ ಇದೆ.

ಇದೀಗ ಬ್ರಿಟನ್ನಿನ ದೈತ್ಯ ವೊಡಾಫೋನ್ ಸಂಸ್ಥೆಯ ಸಿಇಒ ಮಾರ್ಗರಿಟಾ ಡೆಲ್ಲಾ ವ್ಯಾಲೆ ಮುಂದಿನ ಮೂರು ವರ್ಷಗಳಲ್ಲಿ 11 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಹೇಳಿದ್ದಾರೆ.

ವೊಡಾಫೋನ್ ಸರಳ ವಾಣಿಜ್ಯ ಸಂಸ್ಥೆಯಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಬಯಸುತ್ತದೆ. ಜೊತೆಗೆ ತನ್ನ ಕಾರ್ಯಕ್ಷಮತೆ ಸಾಕಷ್ಟು ಉತ್ತಮವಾಗಿಲ್ಲ. ಸ್ಥಿರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಬದಲಾವಣೆಯಾಗಬೇಕಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ 1,04,000 ಉದ್ಯೋಗಿಗಳನ್ನು ಒಳಗೊಂಡಿದ್ದ ವೊಡಾಫೋನ್ ಸಂಸ್ಥೆಯಲ್ಲಿ ಜಾಗತಿಕವಾಗಿ ಶೇ.10 ರಷ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ನಮ್ಮ ಆದ್ಯತೆಗಳೇನಿದ್ದರೂ ಮೊದಲು ಗ್ರಾಹಕರು ನಂತರ ಸರಳತೆ ಮತ್ತು ಕಂಪನಿಯ ಬೆಳವಣಿಗೆಯಾಗಿದೆ.

ಸಂಸ್ಥೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಲು ಬಯಸುತ್ತೇವೆ. ನಮ್ಮ ಸ್ಪರ್ಧಾತ್ಮಕತೆಯನ್ನು ಮರಳಿ ಪಡೆಯಲು ಉದ್ಯೋಗ ಕಡಿತಗೊಳಿಸುತ್ತೇವೆ. ನಮ್ಮ ಗ್ರಾಹಕರು ನಿರೀಕ್ಷಿಸುವ ಮಟ್ಟಕ್ಕೆ ಗುಣಮಟ್ಟದ ಸೇವೆ ಒದಗಿಸಲು ಸಂಪನ್ಮೂಲ ಮರುಹಂಚಿಕೆ ಮಾಡುತ್ತೇವೆ ಎಂದು ಮಾರ್ಗರಿಟಾ ಡೆಲ್ಲಾ ವ್ಯಾಲೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂಡನ್‍ಬರ್ಗ್: ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ