Select Your Language

Notifications

webdunia
webdunia
webdunia
webdunia

915 ನಾಣ್ಯಗಳನ್ನು ನುಂಗಿದ ಬ್ಯಾಂಕ್‌ಗೆ ಶಸ್ತ್ರಚಿಕಿತ್ಸೆ

915 ನಾಣ್ಯಗಳನ್ನು ನುಂಗಿದ ಬ್ಯಾಂಕ್‌ಗೆ ಶಸ್ತ್ರಚಿಕಿತ್ಸೆ
ಶ್ರೀರಚಾ , ಮಂಗಳವಾರ, 7 ಮಾರ್ಚ್ 2017 (18:14 IST)
ಮಕ್ಕಳು ನಾಣ್ಯ ನುಂಗಿದ ಬಗ್ಗೆ ಕೇಳಿರುತ್ತೀರಾ. ಆದರೆ ಥೈಲ್ಯಾಂಡ್‌ನಲ್ಲೊಂದು ಸಮುದ್ರದ ಆಮೆ ಬರೊಬ್ಬರಿ 915 ನಾಣ್ಯಗಳನ್ನು ನುಂಗಿದೆ ಎಂದರೆ ನಂಬುತ್ತೀರಾ. ಆದರೆ ಇದು ಸತ್ಯ ಘಟನೆ. 
ಶ್ರೀರಚಾ ನಗರದಲ್ಲಿರುವ ಕೊಳದಲ್ಲಿ ವಾಸವಾಗಿದ್ದ 25 ರ ಪ್ರಾಯದ ಬ್ಯಾಂಕ್‌ ಹೆಸರಿನ ಆಮೆ ದೇಹದಿಂದ ಇತ್ತೀಚಿಗೆ ವೈದ್ಯರು 915 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
 
ಅಷ್ಟಕ್ಕೂ ಇಷ್ಟೊಂದು ನಾಣ್ಯಗಳು ಅದಕ್ಕೆ ಹೇಗೆ ಸಿಕ್ಕವು ಎಂಬ ಪ್ರಶ್ನೆ ನಿಮ್ಮನ್ನು ಕಾಡದಿರದು. ಭಾರತದಲ್ಲಿ ಪುಣ್ಯಸ್ಥಳಕ್ಕೆ ಹೋದಾಗ ಜನರು ಅಲ್ಲಿನ ನದಿಗಳಲ್ಲಿ, ಕೊಳಗಳಲ್ಲಿ ನಾಣ್ಯಗಳನ್ನೆಸೆಯುತ್ತಾರೆ. ಥೈಲ್ಯಾಂಡ್‌ನಲ್ಲೂ ಜನರು ಇಂತಹದೊಂದು ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಯಾತ್ರಾ ಸ್ಥಳವಾಗಿರುವ ಶ್ರೀರಚಾ ನಗರದಲ್ಲಿರುವ ಕೊಳದಲ್ಲಿ ನಾಣ್ಯ ಎಸೆದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಜನರು ನಾಣ್ಯಗಳನ್ನೆಸೆಯುತ್ತಾರೆ. ಅದನ್ನು ಆಹಾರವೆಂದುಕೊಂಡ ಆಮೆ ತನ್ನ ಹೆಸರಿಗೆ ತಕ್ಕಂತೆ ಆ ನಾಣ್ಯಗಳನ್ನು ತನ್ನ ಉದರದಲ್ಲಿ ಜಮಾವಣೆ ಮಾಡಿದೆ.
 
ಇದರಿಂದ ಅದರ ಉದರ 5 ಕೆಜಿ ಹೆಚ್ಚಾಗಿ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ನಡೆಯಲು ಕಷ್ಟ ಪಡುತ್ತಿದ್ದ ಆಮೆಯನ್ನು ಪಶು ವೈದ್ಯರು ಪರೀಕ್ಷಿಸಿದಾಗ ನಾಣ್ಯಗಳನ್ನು ನುಂಗಿರುವುದು ಬೆಳಕಿಗೆ ಬಂದಿದ್ದು ಇತ್ತೀಚಿಗೆ ಸತತ ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅದರ ಉದರದಿಂದ ನಾಣ್ಯಗಳನ್ನು ಹೊರತೆಗೆಯಲಾಗಿದೆ.
 
ಸದ್ಯ ಆಮೆ ಚೇತರಿಸಿಕೊಳ್ಳುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶದ ಲಕ್ನೋದಲ್ಲಿ ಶಂಕಿತ ಉಗ್ರನಿಂದ ಫೈರಿಂಗ್