ನ್ಯೂಯಾರ್ಕ್:ಪ್ಯಾರಿಸ್ ಜಾಗತಿಕ ಹವಾಮಾನ ಒಪ್ಪಂದದಿಂದ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಒಪ್ಪಂದದಿಂದ ಚೀನಾ, ಭಾರತದಂತಹ ದೇಶಗಳು ಅತ್ಯಂತ ಲಾಭ ಪಡೆದುಕೊಳ್ಳಲಿವೆ. ಆದರೆ ಒಪ್ಪಂದದಿಂದ ಅಮೆರಿಕಾದ ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುವುದರಿಂದ ತಮ್ಮ ದೇಶಕ್ಕೆ ಪ್ಯಾರಿಸ್ ಒಪ್ಪಂದದ ಅಗತ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಬರಾಕ್ ಒಬಾಮಾ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಬದಲಾವಣೆ ಮಾಡಲು ಅವಕಾಶವಿತ್ತು ಎಂದು ಪ್ರತಿಪಾದಿಸಿದ್ದಾರೆ. ಪ್ಯಾರಿಸ್ ಒಪ್ಪಂದದಡಿ ತನ್ನ ಬದ್ಧತೆಯನ್ನು ಈಡೇರಿಸಲು ಭಾರತ ಶತಕೋಟಿ ಡಾಲರ್ ಪಡೆದುಕೊಳ್ಳಲಿದೆ. ಮಾತ್ರವಲ್ಲದೆ ಚೀನಾದೊಂದಿಗೆ 2020 ರ ವೇಳೆಗೆ ಕಲ್ಲಿದ್ದಲು ಆಧಾರಿತ ಇಂಧನ ಘಟಕಗಳಿಗೆ ದ್ವಿಗುಣ ಮೊತ್ತದ ಹಣ ಪಡೆದುಕೊಳ್ಳಲಿದೆ ಎಂದಿದ್ದಾರೆ.
ಅಮೆರಿಕಾದ ನಿರ್ಧಾರವನ್ನು ವಿಶ್ವದ ಹಲವು ಮುಖಂಡರು ಖಂಡಿಸಿದ್ದಾರೆ. ಫ್ರಾನ್ಸ್, ಜರ್ಮನಿ ಮತ್ತು ಇಟೆಲಿ ದೇಶಗಳ ನಾಯಕರು ಟ್ರಂಪ್ ನಿರ್ಧಾರ ಸರೊಯಲ್ಲ ಎಂದಿದ್ದಾರೆ. ಇನ್ನು ಬರಾಕ್ ಒಬಾಮ ಕೂಡ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಿದ್ದು, ಇದರಿಂದ ಟ್ರಂಪ್ಸ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
190ಕ್ಕೂ ಅಧಿಕ ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು.