ನ್ಯೂಯಾರ್ಕ್: ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳ ಸ್ವಾದ ಎಲ್ಲಾದರೂ ಸಿಗಲು ಸಾಧ‍್ಯವೇ? ಅಮೆರಿಕಾದ ರೆಸ್ಟೋರೆಂಟ್ ಒಂದು ನಮ್ಮ ಇಡ್ಲಿ, ವಡೆ ಇತ್ಯಾದಿ ತಿಂಡಿಗಳನ್ನು ಹೆಸರು ಬದಲಾಯಿಸಿ ಮಾರಾಟ ಮಾಡಿದ್ದು, ಭಾರತೀಯರಿಂದ ಮಂಗಳಾರತಿ ಮಾಡಿಸಿಕೊಂಡಿದೆ.
ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಾದ ಇಡ್ಲಿ, ವಡೆ, ಸಾಂಬಾರ್, ದೋಸೆಗೆ ತಮ್ಮದೇ ಹೆಸರಿಟ್ಟು ಇಂಡಿನಯ್ ಕ್ರೀಪ್ ಕೊ. ಎಂಬ ರೆಸ್ಟೋರೆಂಟ್ ಮಾರಾಟ ಮಾಡಿದೆ.
ಇದನ್ನು ಗಮನಿಸಿದ ಭಾರತೀಯರು ಟ್ವಿಟರ್ ನಲ್ಲಿ ಈ ರೆಸ್ಟೋರೆಂಟ್ ನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ನಮ್ಮ ತಿಂಡಿಗಳ ರೆಸಿಪಿ ಕದ್ದು ಬೇರೆ ಹೆಸರಲ್ಲಿ ಮಾರಾಟ ಮಾಡುತ್ತಿದ್ದೀರಾ ಎಂದು ಈ ತಿಂಡಿಗಳ ನಿಜ ಹೆಸರುಗಳನ್ನು ಬರೆದು ರೆಸ್ಟೋರೆಂಟ್ ನವರ ಬೆವರಿಳಿಸಿದ್ದಾರೆ.