Daily Horoscope

Select Your Language

Notifications

webdunia
webdunia
webdunia
webdunia

ಇರಾನ್‌ನಲ್ಲಿ ಸ್ಪೋಟಗೊಳ್ಳದ ಬಾಂಬ್‌ಗಳನ್ನು ನಿಷ್ಟ್ರಿಯಗೊಳಿಸುವ ವೇಳೆ ಅವಘಡ: 14ಮಂದಿ ಸಾವು

Iran Bomb Blast
ಟೆಹರಾನ್: ಸ್ಟೋಟಗೊಳ್ಳದೇ ಹಾಗೆ ಉಳಿದಿದ್ದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ 14ಮಂದಿ ಸದಸ್ಯರಯ ಸಾವನ್ನಪ್ಪಿದ್ದಾರೆಂದು ಇರಾನ್‌ ಮಾಧ್ಯಮ ವರದಿ ಮಾಡಿದೆ. 

ಟೆಹರಾನ್‌ನ ವಾಯವ್ಯ ಭಾಗದಲ್ಲಿರುವ ಉತ್ತರ ನಗರ ಝಂಜಾನ್ ಬಳಿ ಈ ಸ್ಫೋಟ ಸಂಭವಿಸಿದೆ. ಯುದ್ಧದ ಸಮಯದಲ್ಲಿ ಹಾಕಲಾಗಿದ್ದ ಕ್ಲಸ್ಟರ್ ಬಾಂಬ್‌ಗಳು ಸ್ಟೋಟಗೊಂಡು ಹಲವರ ಸಾವಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಫೆ.28ರಂದು ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಯಾಗಿ ಇರಾನ್‌, ಕೊಲ್ಲಿ ರಾಷ್ಟ್ರಗಳ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಯುದ್ಧದಿಂದ ಇಸ್ರೇಲ್‌ ಮತ್ತು ಇರಾನ್‌ನಲ್ಲಿ ಅಪಾರ ಹಾನಿಯಾಗಿದೆ.

ಹೊರ್ಮುಜ್‌ ಜಲಸಂಧಿಯನ್ನು ನಿಯಂತ್ರಿಸುವ ಮೂಲಕ ಇರಾನ್‌ ಯುದ್ಧವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿತ್ತು. ಇರಾನ್‌ನ ಈ ನಡೆಯು ಜಾಗತಿಕ ಆರ್ಥಿಕತೆ ಮೇಲೆ ತೀವ್ರ ಪರಿಣಾಮವನ್ನೂ ಬೀರಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಮಳೆಯನ್ನು ನಿರೀಕ್ಷಿಸಬಹುದೆ