ವಾಷಿಂಗ್ಟನ್ : ಹಿಮ ಸುನಾಮಿಗೆ ಅಮೆರಿಕ -ಕೆನಡಾ ಮತ್ತೊಮ್ಮೆ ತಲ್ಲಣಿಸಿದೆ. ಕ್ರಿಸ್ಮಸ್ ಸಂಭ್ರಮದ ಹೊತ್ತಲ್ಲಿ ಶೀತ ಸೂತಕ ಆವರಿಸಿದ್ದು, ಈವರೆಗೆ 38 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ 34, ಕೆನಡಾದಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ತಾಪಮಾನ ಕೆಲವು ಕಡೆ ಮೈನಸ್ 45 ಡಿಗ್ರಿಗೆ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್ನಿಂದ ಕ್ಯೂಬೆಕ್ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ.