Webdunia - Bharat's app for daily news and videos

Install App

ಟ್ರಂಪ್ ಇನ್ನಿಲ್ಲ ಪೋಸ್ಟ್‌: ನಿಜವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಗಿದ್ದೇನು

Sampriya
ಶನಿವಾರ, 30 ಆಗಸ್ಟ್ 2025 (17:00 IST)
Photo Credit X
ವಾಷಿಂಗ್ಟನ್: ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು 'ಟ್ರಂಪ್‌ ಈಸ್‌ ಡೆಡ್‌’ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

'TRUMP IS DEAD’ ಎಂದು ಇದುವರೆಗೂ 50 ಸಾವಿರಕ್ಕೂ ಅಧಿಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ‘Where is Donald Trump’ ಹಾಗೂ ‘it happened’ ಎನ್ನುವುದು ಕೂಡ ‘ಎಕ್ಸ್‌’ನಲ್ಲಿ ಸದ್ದು ಮಾಡುತ್ತಿದೆ.

ಇದಕ್ಕೆಲ್ಲ ಕಾರಣ ಕಳೆದ ಕೆಲ ದಿನಗಳಿಂದ ಟ್ರಂಪ್ ಆರೋಗ್ಯ ಉತ್ತಮವಾಗಿಲ್ಲ ಎಂಬ ವರದಿಗಳು ಬಿತ್ತರಗೊಂಡಿದ್ದರು. ಇದೀಗ ಅಧ್ಯಕ್ಷರ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

79 ವರ್ಷದ ನಿಧನ ಹೊಂದಿರದ ಅಮೆರಿಕ ಅಧ್ಯಕ್ಷರ ಮರಣ ವಾರ್ತೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಕಾರಣವಾಗಿರುವುದು ಅಲ್ಲಿನ ಉಪಾಧ್ಯಕ್ಷರ ಹೇಳಿಕೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರ ಹೇಳಿಕೆಯೂ ಈ ವದಂತಿಗೆ ಕಾರಣ ಎನ್ನಲಾಗಿದೆ. ಆ.27ಕ್ಕೆ ‘ಯುಎಸ್‌ಎ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ‘ಒಂದು ವೇಳೆ ಏನಾದರೂ ದುರಂತ ಸಂಭವಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೃತಪಟ್ಟರೆ ಅವರ ಜಾಗವನ್ನು ನಾನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದು ಹೇಳಿದ್ದರು. ಆ ಹೇಳಿಕೆಯು 'ಟ್ರಂಪ್‌ ಈಸ್‌ ಡೆಡ್‌’ ಎಂದು ಹರಿದಾಡುವುದಕ್ಕೆ ಕಾರಣವಾಗಿದೆ.

ಅದೇ ಸಂದರ್ಶನದಲ್ಲಿ ಟ್ರಂಪ್‌ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಗಂಭೀರ ಕಾಯಿಲೆಯಿಲ್ಲ ಎಂದು ವ್ಯಾನ್ಸ್‌ ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಉಪಾಧ್ಯಕ್ಷರ ಹೇಳಿಕೆಯು 'ಟ್ರಂಪ್‌ ಈಸ್‌ ಡೆಡ್‌’ ಆಗಿ ಬದಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷ್ಣವರ್ಧನ್‌ ಸಮಾಧಿ ತೆರವುಗೊಳಿಸಿ ಜಮೀನನ್ನೂ ಮಾರಲು ಹೊರಟ ಬಾಲಣ್ಣನ ಮಕ್ಕಳಿಗೆ ಶಾಕ್‌ ಮೇಲೆ ಶಾಕ್‌

ವ್ಯಕ್ತಿಯಲ್ಲಿ ರಕ್ತ ಮಿಶ್ರಿತ ಕಫ, ಎಕ್ಸರೇ ರಿಪೋರ್ಟ್ ನೋಡಿ ಬೆಚ್ಚಿಬಿದ್ದ ವೈದ್ಯರು

ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಣೆ: ಕಾರಣ ಕೇಳಿ ಬೆಚ್ಚಿದ ಪೋಷಕರು

ಚೀನಾದ ಟಿಯಾಂಜಿನ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ಸಿಕ್ತು ಭವ್ಯ ಸ್ವಾಗತ

ಪತ್ನಿ ಸಾವು, ಆಕೆಯ ತಂಗಿಯನ್ನೇ ಮತ್ತೇ ಮದುವೆಯಾದ ಭೂಪನ ಡಿಮ್ಯಾಂಡ್ ಕೇಳಿದ್ರೆ ಶಾಕ್‌

ಮುಂದಿನ ಸುದ್ದಿ
Show comments