Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ:6 ಸಾವು, 150 ಜನರಿಗೆ ಗಾಯ

inter nationla news in kannada
ಇಸ್ಲಾಮಾಬಾದ್ , ಗುರುವಾರ, 15 ಸೆಪ್ಟಂಬರ್ 2016 (17:16 IST)
ಪಾಕಿಸ್ತಾನದಲ್ಲಿ ಗುರುವಾರ ಮುಂಜಾನೆ ಭೀಕರ ರೈಲು ದುರಂತ ಸಂಭವಿಸಿದ್ದು ಕನಿಷ್ಠ 6 ಜನರು ಸಾವನ್ನಪ್ಪಿ, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
ಕರಾಚಿಗೆ ಹೋಗುತ್ತಿದ್ದ ಆವಾಮ್ ಎಕ್ಸಪ್ರೆಸ್ ಮುಲ್ತಾನ್ ಸಮೀಪ ಸರಕು ರೈಲಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. 
 
ಬುಚ್ ರೈಲು ನಿಲ್ದಾಣದ ಶೇರ್ ಶಾ ಪ್ರದೇಶದ ಬಳಿ ಈ ಘಟನೆ ನಡೆದಿದ್ದು, ಆವಾಮ್ ಎಕ್ಸಪ್ರೆಸ್ ರೈಲಿನ ನಾಲ್ಕು ಬೋಗಿಗಳು ಮುಗುಚಿ ಬಿದ್ದಿವೆ. 
 
ದುರ್ಘಟನೆಯಲ್ಲಿ ಕನಿಷ್ಠ 6 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದರಲ್ಲಿ 10 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
 
ಪ್ಯಾಸೆಂಜರ್ ರೈಲು ಕರಾಚಿಯಿಂದ ಪೇಷಾವರದ ಕಡೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಮಾಂಸ ಸೇವನೆಯನ್ನು ಏಕೆ ಅಪರಾಧಿಕರಣಗೊಳಿಸುತ್ತೀರಿ?: ಹೈಕೋರ್ಟ್