Webdunia - Bharat's app for daily news and videos

Install App

ಚಿನ್ನದ ಟಾಯ್ಲೆಟ್ ಬಳಸುತ್ತಿದ್ದ ಟ್ರಾಫಿಕ್ ಪೊಲೀಸ್ ಶಾಕ್!

Webdunia
ಶನಿವಾರ, 24 ಜುಲೈ 2021 (16:30 IST)
ಮಾಸ್ಕೋ(ಜು.24): ರಷ್ಯಾ ಅಧಿಕಾರಿಗಳು ಸಾವಿರಾರು ಡಾಲರ್ ಲಂಚ ಪಡೆಯುತ್ತಿದ್ದವರನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಅನೇಕ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದರೆ ಈ ನಡುವೆ ಸಂಚಾರ ಪೊಲೀಸರ ಮುಖ್ಯಸ್ಥ ಶೌಚಾಲಯ ಮತ್ತು ಅವರ ಮನೆ ಸದ್ಯ ಎಲ್ಲರ ಗಮನ ಸೆಳೆದಿದೆ. ಹೌದು ಈ ಶೌಚಾಲಯ ಚಿನ್ನದಿಂದ ಮಾಡಲ್ಪಟ್ಟಿದೆ ಹಾಗೂ ನೆಲ ಅಮೃತಶಿಲೆಯಿಂದ ಮಾಡಲಾಗಿದೆ.

* ಲಂಚ ಪಡೆಯುತ್ತಿದ್ದವರ ಬಣ್ಣ ಬಯಲು
* ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್
* ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಅಧಿಕಾರಿಗಳು

 ದ ಮಾಸ್ಕೋ ಟೈಮ್ಸ್ ವರದಿ ಅನ್ವಯ ಪೊಲೀಸ್ ಕರ್ನಲ್ ಅಲೆಕ್ಸಿ ಸಫೊನೊವ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರು ದೋಷಿ ಎಂದು ಸಾಬೀತಾಗಿದೆ. ಹೀಗಾಗಿ ಜೈಲು ಪಾಲಾಗಿದ್ದಾರೆ. ತನಿಖಾ ಸಮಿತಿಯು ಸಫೊನೊವ್ ಮನೆ ಒಳಗಿನ ಭಾಗ ಹಾಗೂ ಐಷಾರಾಮಿ ವಾಹನಗಳನ್ನು ನಿಲ್ಲಿಸಿದ ಸೊಂಪಾದ ಹುಲ್ಲುಹಾಸುಗಳೊಂದಿಗೆ ಅವರ ಭವ್ಯ ನಿವಾಸದ ತುಣುಕನ್ನು ಬಿಡುಗಡೆ ಮಾಡಿತು.
ಈ ವಿಡಿಯೋದಲ್ಲಿ ಪೀಠೋಪಕರಣಗಳು, ವಾಲ್ ಆರ್ಟ್ ಚೌಕಟ್ಟುಗಳು ಮತ್ತು ಅಲಂಕಾರಿಕ ತುಣುಕುಗಳಲ್ಲಿ ಚಿನ್ನದ ವ್ಯಾಪಕ ಬಳಕೆಯೊಂದಿಗೆ ಅಸಾಮಾನ್ಯ ಒಳಾಂಗಣದ ದೃಶ್ಯವಿದೆ . ಅಲ್ಲದೇ ಅಡುಗೆಡ ಮನೆಯ ಪೀಠೋಪಕರಣಗಳು ಸಹ ಚಿನ್ನದಿಂದ ಮಾಡಲ್ಪಟ್ಟಿದೆ. ಮುಖ್ಯ ದ್ವಾರದ ಬದಿಯಲ್ಲಿ ಅತಿಥಿಗಳಿಗಾಗಿ ಒಂದು ಔಟ್ಹೌಸ್ ಕೂಡಾ ನಿರ್ಮಿಸಲಾಗಿದೆ.
ಹೀಗಿದ್ದರೂ ಶೌಚಾಲಯವನ್ನು ಚಿನ್ನದಿಂದ ಅಲಂಕರಿಸುವುದು ಅತ್ಯಂತ ಆಶ್ಚರ್ಯಕರ ಬಳಕೆಯಾಗಿದೆ.
ಜುಲೈ 20 ರಂದು ಇದನ್ನು ನೀಡಲಾಗಿದೆ. ಐಷಾರಾಮಿ ರಿಯಲ್ ಎಸ್ಟೇಟ್ ಜಾಹೀರಾತಿನಂತೆ ಕಾಣುವ 49 ಸೆಕೆಂಡುಗಳ ಯೂಟ್ಯೂಬ್ ವಿಡಿಯೋ 3.45 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಜನರು ಸಹ ಇದರ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾರಿ ಶಕ್ತಿಯ ಚಿಹ್ನೆ ಸಿಂಧೂರ್‌: ಅಹಲ್ಯಾಬಾಯಿ ಹೋಳ್ಕರ್‌ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

London viral video: ಈಕೆ ಕೈಯಲ್ಲಿ ಊಟ ಮಾಡಿದ್ದೇ ತಪ್ಪಾಯ್ತು, ಏನಾಗಿದೆ ವಿಡಿಯೋ ನೋಡಿ

ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ತೆರಿಗೆ ಹಣ ಬಳಕೆ: BY ವಿಜಯೇಂದ್ರ ಟೀಕೆ

Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

World No Tobbacco Day: ಆರೋಗ್ಯ ದೃಷ್ಟಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ

ಮುಂದಿನ ಸುದ್ದಿ
Show comments