Select Your Language

Notifications

webdunia
webdunia
webdunia
webdunia

85 ಸಾವಿರ ಪೌಂಡ್ ಗೆ ಹರಾಜಾದ ಟೈಟಾನಿಕ್ ಲಾಕರ್ ಕೀ

85 ಸಾವಿರ ಪೌಂಡ್ ಗೆ ಹರಾಜಾದ ಟೈಟಾನಿಕ್ ಲಾಕರ್ ಕೀ
ಲಂಡನ , ಸೋಮವಾರ, 24 ಅಕ್ಟೋಬರ್ 2016 (13:27 IST)

ಲಂಡನ: ಟೈಟಾನಿಕ್ ಎಂದಾಗ ಥಟ್ಟನೆ 1912 ರಲ್ಲಿ ಸಾಗರದಾಳದಲ್ಲಿ ಮುಳುಗಡೆಯಾದ ಹಡಗು ನೆನಪಿಗೆ ಬರುತ್ತದೆ. ಹೌದು, ಆ ಹಡಗಿನಲ್ಲಿ ಜೀವರಕ್ಷಕ ಕವಚವಿದ್ದ ಲಾಕರ್ ನ ಕೀಲಿ ಕೈ  85,000 ಪೌಂಡ್ ಗೆ ಹರಾಜಾಗಿದೆ.
 


 

ಲಂಡನ್ ಉದ್ಯಮಿಯೊಬ್ಬರು ಇಷ್ಟೊಂದು ಬೃಹತ್ ಮೊತ್ತ ನೀಡಿ ಆ ಕೀಲಿ ಕೈ ತಮ್ಮದಾಗಿಸಿಕೊಂಡಿದ್ದಾರೆ. ಇದುವರೆಗೆ ನಡೆದ ಟೈಟಾನಿಕ್ ಹಡಗಿನ ಕೆಲ ಉಪಯುಕ್ತ ವಸ್ತುಗಳ ಹರಾಜಿನಲ್ಲಿ ಇದು ಬಹುದೊಡ್ಡ ಮೊತ್ತವಾಗಿದೆ. 50,000 ಪೌಂಡ್ ಗೆ ಕೀಲಿ ಕೈ ಹರಾಜಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದನ್ನೂ ಮೀರಿ ಹರಾಜಾಗಿದ್ದು ಅದರ ಹೆಗ್ಗಳಿಕೆ ತೋರಿಸುತ್ತದೆ ಎಂದು ಹರಾಜುದಾರ ಆ್ಯಂಡ್ರೂ ಅಲ್ಡಿಡ್ಸ್ ಹೇಳುತ್ತಾರೆ. ಇದರ ಜೊತೆಗೆ ಇನ್ನೂ ಅನೇಕ ಸ್ಮರಣಿಕೆಗಳು ಹರಾಜಾಗಿವೆ.

 

ಈ ಕೀಲಿ ಕೈ 1912 ರಲ್ಲಿ ಟೈಟಾನಿಕ್ ಹಡಗು ಮುಳುಗಡೆಯಾದಾಗ ಹಡಗಿನಲ್ಲಿ ಮೂರನೇ ದರ್ಜೆಯ ಪರಿಚಾರಕನಾಗಿದ್ದ ಬರ್ಕೇಶರ್ ನಿವಾಸಿ ಸಿಡ್ನಿ ಸೆಡುನರಿ ಅವರಿಗೆ ಸೇರಿದ್ದಾಗಿತ್ತು. ಹಡಗು ಮುಳುಗಡೆ ಸಂದರ್ಭದಲ್ಲಿ ಸಿಡ್ನಿ ಪ್ರಯಾಣಿಕರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆ್ಯಂಡ್ರೂ ಹರಾಜಿನ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಾಪ್ ನಿಂದ ವಿಡಿಯೋ ಕರೆ: ಸ್ವಲ್ಪ ದಿನ ವೇಟ್ ಮಾಡಿ