Select Your Language

Notifications

webdunia
webdunia
webdunia
webdunia

ಮೃತ ಯಜಮಾನನ ಮೇಲೆ ಬೆಕ್ಕಿನ ಪ್ರೀತಿ ಅದಮ್ಯ ಪ್ರೀತಿ ನೋಡಿ

ಮೃತ ಯಜಮಾನನ ಮೇಲೆ ಬೆಕ್ಕಿನ ಪ್ರೀತಿ ಅದಮ್ಯ ಪ್ರೀತಿ ನೋಡಿ
ಜಾವಾ , ಶುಕ್ರವಾರ, 4 ನವೆಂಬರ್ 2016 (12:24 IST)
ಸಾಕು ಪ್ರಾಣಿಗಳು ಮನೆಯ ಸದಸ್ಯರಷ್ಟೇ ಆಪ್ತರಾಗಿರುತ್ತವೆ. ಅವು ತೋರಿಸುವ ಪ್ರೀತಿಯಂತೂ ಮನುಷ್ಯರನ್ನೇ ನಾಚಿಸುತ್ತದೆ. ತಮ್ಮನ್ನು ಪ್ರೀತಿಸುವವರ ಅಗಲಿಕೆಯಲ್ಲಂತೂ ಅವರು ಅಕ್ಷರಶಃ ಖಿನ್ನತೆಗೆ ಜಾರಿ ಬಿಡುತ್ತವೆ. ಕೆಲವಂತೂ ಆಹಾರವನ್ನು ತ್ಯಜಿಸಿ ಪ್ರಾಣವನ್ನು ಕಳೆದುಕೊಂಡು ಬಿಡುತ್ತವೆ. ಇಂತಹ ಪ್ರಾಣಿ ಪ್ರೀತಿಗೊಂದು ಅತ್ಯುನ್ನತ ಉದಾಹರಣೆ ಈ ಬೆಕ್ಕು. ಅಗಲಿದ ತನ್ನ ಮಾಲೀಕನನ್ನು ಮರೆಯಲಾಗದೆ ಪರದಾಡುತ್ತಿರುವ ಇದು ಆತನಿಗಾಗಿ ಮಿಡಿಯುತ್ತಿರುವ ರೀತಿ ಅನನ್ಯವಾದುದು.

 
ಇದು ಇಂಡೋನೇಶ್ಯಾದ ಕೇಂದ್ರ ಜಾವಾದಲ್ಲಿ ಬೆಳಕಿಗೆ ಬಂದಿರುವ ಘಟನೆ. ಕೆಲಿ ಕೆನ್ನಿಂಗೌ ಪ್ರಾಯಿತ್ನೋ(28) ಎಂಬುವವರು ಒಂದು ದಿನ ಸಮಾಧಿಯೊಂದರ ಮೇಲೆ ಬೆಕ್ಕೊಂದು ಕುಳಿತಿರುವುದನ್ನು ನೋಡಿದ್ದರು. ಮರುದಿನವೂ ಅದು ಅಲ್ಲೇ ಕುಳಿತಿದ್ದುದನ್ನು ನೋಡಿದ ಅವರಿಗೆ ಕುತೂಹಲವಾಯಿತು. ಪ್ರತಿದಿನ ಅದರ ಮೇಲೆ ಗಮನವಿಟ್ಟ ಅವರಿಗೆ ಆಶ್ಚರ್ಯ ಇಮ್ಮಡಿಯಾಗುತ್ತ ಹೋಯಿತು. ಆ ಬೆಕ್ಕು ಸದಾ ಅಲ್ಲಿಯೇ ಕುಳಿತಿರುತ್ತಿತ್ತು. ಮೂಕ ಪ್ರಾಣಿ ಈ ವರ್ತನೆಗೆ ಮೂಕ ಮಿಸ್ಮಿತರಾದ ಅವರು ಅದಕ್ಕೆ ಆಹಾರವನ್ನು ನೀಡಿದರು. ಆದರೆ ಅದು ಸ್ವೀಕರಿಸಲಿಲ್ಲ. ಹೀಗಾಗಿ ಅದನ್ನು ಮನೆಗೆ ಎತ್ತಿಕೊಂಡು ಹೋದರು. ಆದರೆ ಬೆಕ್ಕು ಕೆಲವೇ ಕ್ಷಣಗಳಲ್ಲಿ ಮರಳಿ ಆ ಸಮಾಧಿಯ ಮೇಲೆ ಬಂದು ಒರಗಿಗೊಂಡಿತು. 
 
ಆ ಬೆಕ್ಕಿನ ಯಜಮಾನ ಒಂದು ವರ್ಷದ ಹಿಂದೆ ಸಾವನ್ನಪ್ಪಿದ್ದು ಅಂದಿನಿಂದ ಪ್ರತಿದಿನ ಬೆಕ್ಕು ಅವನ ಸಮಾಧಿಯ ಮೇಲೆ ವಾಸಿಸುತ್ತಿದೆಯಂತೆ. ಹಸಿವಾದಾಗ ತನ್ನ ಯಜಮಾನನ ಮನೆಗೆ ಹೋಗಿ ಆಹಾರ ಸೇವಿಸಿಕೊಂಡು ಬಂದು ಅದು ಅಲ್ಲಿಯೇ ವಿರಮಿಸುತ್ತದೆ. ಬೆಕ್ಕಿನ ಈ ಶೋಕ ಹೃದಯಕ್ಕೆ ವೇದನೆಯನ್ನು ನೀಡುತ್ತದೆ ಎನ್ನುತ್ತಾರೆ ಕೆಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಛೀ! ಗ್ಯಾಂಗ್ ರೇಪ್ ಪೀಡಿತೆಗೆ ಪೊಲೀಸರು ಕೇಳಿದ ಅಸಭ್ಯ ಪ್ರಶ್ನೆ ಇದು!