ಪಾರ್ಟಿಯ ಮೂಡಿನಲ್ಲಿ ತನ್ನ ಮಕ್ಕಳ ಜೀವ ತೆಗೆದ ತಾಯಿಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಗುರುವಾರ, 20 ಡಿಸೆಂಬರ್ 2018 (09:11 IST)
ಅಮೇರಿಕಾ : ತಾಯಿಯೊಬ್ಬಳು  ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತನ್ನ ಒಂದು ಹಾಗೂ ಎರಡು ವರ್ಷದ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಅವರ ಸಾವಿಗೆ ಕಾರಣಳಾದ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.


ಅಮಂಡಾ ಹಾಕ್ಸಿನ್ ಎನ್ನುವ ಮಹಿಳೆ ಜೂನ್ 7ರಂದು ತನ್ನ ಒಂದು ಹಾಗೂ ಎರಡು ವರ್ಷದ ಮಕ್ಕಳನ್ನು ಕಾರಿನಲ್ಲಿಯೇ‌ ಬಿಟ್ಟು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು‌ ತೆರಳಿದ್ದಾಳೆ. ಈ ವೇಳೆ ಕಾರಿನೊಳಗೆ ತಾಪಮಾನ ಹೆಚ್ಚಾಗಿ, ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮೊದಲು ಆಕೆ ಕೆರೆಯೊಂದರಲ್ಲಿ ಇಬ್ಬರು ಮಕ್ಕಳು‌ ಹೂವೊಂದರ ವಾಸನೆ ತೆಗೆದುಕೊಂಡಿದ್ದಕ್ಕೆ ಮೂರ್ಛೆ ಹೋಗಿದ್ದು ಬಳಿಕ‌ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಳು. ಆದರೆ ಪೊಲೀಸರ ತನಿಖೆಯ‌ ಬಳಿಕ,‌ ಮಕ್ಕಳು‌ ಕಾರಿನಲ್ಲಿ‌ ಉಸಿರುಗಟ್ಟಿ ಸಾವನ್ನಪಿದ್ದಾರೆ ಎಂದು ತಿಳಿದುಬಂದಿದೆ.


ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು  ತಾಯಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಪ್ರತಿ ಮಗುವಿನ ಸಾವಿಗೆ 20 ವರ್ಷ ಜೈಲು‌ ಶಿಕ್ಷೆಯೆಂದು ಆಕೆಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಚ್ಚರಿಕೆ! ಸಾಕ್ಸ್ ವಾಸನೆ ತೆಗೆದುಕೊಂಡರೆ ಈ ಖಾಯಿಲೆ ಬರುವುದು ಖಂಡಿತ