ತಾಲಿಬಾನ್ : ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ!

Webdunia
ಸೋಮವಾರ, 28 ಮಾರ್ಚ್ 2022 (13:28 IST)
ಕಾಬೂಲ್ : ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಇಲ್ಲಿಗೆ 9 ತಿಂಗಳುಗಳೇ ಕಳೆದಿವೆ.

ತಾಲಿಬಾನ್ ಆಡಳಿತ ಪ್ರಾರಂಭವಾದಾಗಿನಿಂದ ಒಂದೆಡೆ ಜನರು ಹಸಿವಿನಿಂದ ಒದ್ದಾಡುವಂತಾಗಿದ್ದರೆ, ಮತ್ತೊಂದೆಡೆ ತಾಲಿಬಾನ್ ಆದೇಶಗಳಿಂದಾಗಿ ಅಲ್ಲಿನ ಮಹಿಳೆಯರ ಜೀವನ ಕಷ್ಟಕರವಾಗುತ್ತಲೇ ಇದೆ.

ಇದೀಗ ತಾಲಿಬಾನ್ನ ಹೊಸ ಆದೇಶ ಕಾಬೂಲ್ನಲ್ಲಿ ಮಹಿಳೆಯರು ಪುರುಷರೊಂದಿಗೆ ಪಾರ್ಕ್ ತೆರಳಲು ನಿಷೇಧಿಸಿದೆ. ಇದರ ಪ್ರಕಾರ ಮಹಿಳೆಯರು ಪುರಷರೊಂದಿಗೆ ಒಂದೇ ದಿನ ಪಾರ್ಕ್ ತೆರಳಲು ಸಾಧ್ಯವಾಗುವುದಿಲ್ಲ. 

ತಾಲಿಬಾನ್ ಕಾಬೂಲ್ನಲ್ಲಿ ಮಹಿಳೆಯರಿಗೆ ವಾರದಲ್ಲಿ 3 ದಿನಗಳ ಕಾಲ ಪಾರ್ಕ್ ಪ್ರವೇಶಿಸಲು ಅವಕಾಶ ನೀಡಿದೆ. ಭಾನುವಾರ, ಸೋಮವಾರ ಹಾಗೂ ಮಂಗಳವಾರ ಮಹಿಳೆಯರಿಗೆ ಪಾರ್ಕ್ಗಳಲ್ಲಿ ಪ್ರವೇಶ ನೀಡಿದರೆ ವಾರದ ಉಳಿದ ದಿನಗಳು ಕೇವಲ ಪುರುಷರು ಪ್ರವೇಶಿಸಬಹುದು.

ಒಂದು ವೇಳೆ ಮಹಿಳೆಯರು ಪುರುಷರಿಗೆ ನಿಗದಿ ಪಡಿಸಿರುವ ದಿನಗಳಲ್ಲಿ ಪಾರ್ಕ್ ಪ್ರವೇಶಿಸಿದ್ದಲ್ಲಿ ಅವರಿಗೆ ಕಠಿಣ ಕ್ರಮವನ್ನು ವಿಧಿಸಲಾಗುವುದು ಎಂದು ತಾಲಿಬಾನ್ ಸಂಸ್ಕೃತಿ ಸಚಿವಾಲಯ ಎಚ್ಚರಿಸಿದೆ.

ಜೊತೆಗೆ ಮಹಿಳೆಯರು ಪಾರ್ಕ್ ಪ್ರವೇಶಿಸುವಾಗ ಕಡ್ಡಾಯವಾಗಿ ಹಿಜಬ್ ಧರಿಸಬೇಕು ಎಂದು ಆದೇಶಿಸಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿಗಾಗಿ ಗುದ್ದಾಟದ ನಡುವೆ ಆ ಸ್ಥಾನ ಬೇಕಾಗಿಲ್ಲವೆಂದ ಸಂತೋಷ್ ಲಾಡ್‌

ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ: ತಮಿಳುನಾಡಿನಲ್ಲಿ 7ಮಂದಿ ಸಾವು, 40 ಮಂದಿಗೆ ಗಂಭೀರ ಗಾಯ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆ ಕನ್ನಡವನ್ನು ಶ್ರೀಮಂತಗೊಳಿಸಿದೆ: ಸಿದ್ದರಾಮಯ್ಯ

ಸಿಎಂ, ಡಿಸಿಎಂ ಒಗ್ಗಟ್ಟು ನೋಡಿ ಖುಷಿಯಾಯಿತು: ಸಂತೋಷ್ ಲಾಡ್

ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗ್ತೀದ್ರಾ: ಕುಮಾರಸ್ವಾಮಿಗೆ ಶಿವಕುಮಾರ್ ಪ್ರಶ್ನೆ

ಮುಂದಿನ ಸುದ್ದಿ
Show comments