Select Your Language

Notifications

webdunia
webdunia
webdunia
webdunia

ಭಾನುವಾರದ ಚಂದ್ರಗ್ರಹಣದಲ್ಲಿ ಸೂಪರ್ ಮೂನ್ ದರ್ಶನ

lunar eclipse
ಇಂತಹ ಸೃಷ್ಟಿವೈಚಿತ್ರ್ಯ 33 ವರ್ಷಗಳ ನಂತರ ಸಂಭವಿಸುತ್ತಿದೆ. ಮತ್ತೊಂದು ವೈಚಿತ್ರ್ಯಕ್ಕೆ 18 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಮುಂದಿನ ಭಾನುವಾರ ಸಂಜೆ ಪೂರ್ಣ ಚಂದ್ರಗ್ರಹಣದ ಜತೆ ಸೂಪರ್‌ಮೂನ್ ದರ್ಶನ ಖಗೋಳವೀಕ್ಷಕರನ್ನು ಬೆಕ್ಕಸುಬೆರಗುಗೊಳಿಸಲಿದೆ. ಪೂರ್ಣ ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನನ್ನು ಆವರಿಸಿದಾಗ ಕೆಂಪು ಬಣ್ಣದಲ್ಲಿರುವುದರಿಂದ ಅದಕ್ಕೆ ರಕ್ತವರ್ಣದ ಚಂದ್ರ ಎಂಬ ಉಪನಾಮವಿದೆ. 
 
ಇದು ಭೂಮಿಯ ಸಂಪೂರ್ಣ ನೆರಳಿನಲ್ಲಿದ್ದರೂ ಸೂರ್ಯನ ಕೆಂಪುವರ್ಣದ ಬೆಳಕು ಚಂದ್ರನನ್ನು ಮುಟ್ಟುತ್ತಿರುತ್ತದೆ. ಆ ಕೆಂಪು ಬೆಳಕು ಚಂದ್ರನ ಮೇಲೆ ಪ್ರಕಾಶಮಾನವಾಗಿ ಹೊಳೆಯುತ್ತದೆ.
 
ಪೂರ್ಣ ಚಂದ್ರಗ್ರಹಣ ರಾತ್ರಿ 10.11ಕ್ಕೆ ಆರಂಭವಾಗಿ ಒಂದು ಗಂಟೆ 12 ನಿಮಿಷಗಳ ಕಾಲ ಉಳಿದಿರುತ್ತದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯೂರೋಪ್, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ, ಪೂರ್ವ ಪೆಸಿಫಿಕ್‌ನಲ್ಲಿ ಗೋಚರಿಸುತ್ತದೆ ಎಂದು ನಾಸಾ ಹೇಳಿದೆ. 
 
ಸೂಪರ್ ಮೂನ್ ಎಂದರೇನು?
ಸೂಪರ್‌ಮೂನ್ ಎಂದರೆ ಸಾಮಾನ್ಯವಾಗಿ ಕಾಣುವ ಚಂದ್ರನಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಎಂದಿಗಿಂತ ಭೂಮಿಗೆ ಸ್ವಲ್ಪ ಹತ್ತಿರದಲ್ಲಿರುವುದರಿಂದ ಚಂದ್ರನ ಗಾತ್ರ ದೊಡ್ಡದಾಗಿ ಕಾಣುತ್ತದೆ. ಏಕೆಂದರೆ ಚಂದ್ರನ ನಕ್ಷೆ ಪರಿಪೂರ್ಣ ವೃತ್ತವಾಗಿರದೇ ಕೆಲವು ಬಾರಿ ಚಂದ್ರ ಭೂಮಿಯ ಸುತ್ತ ಪರಿಭ್ರಮಣೆಯಲ್ಲಿ ಭೂಮಿಯ ಸಮೀಪದಲ್ಲಿರುತ್ತದೆ ಎಂದು ನಾಸಾ ವಿಜ್ಞಾನಿ ನೋಹಾ ಪೆಟ್ರೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"

Share this Story:

Follow Webdunia kannada