ಕೊಲಂಬೊ: ಈ ಕಾರಣದಿಂದ ಬ್ರಿಟನ್ ನಿಂದ ಬಂದ ತ್ಯಾಜ್ಯ ವಸ್ತುಗಳನ್ನು ಶ್ರೀಲಂಕಾ ವಾಪಾಸು ಕಳುಹಿಸಿದೆ ಎಂಬುದಾಗಿ ತಿಳಿದುಬಂದಿದೆ.
ಬ್ರಿಟನ್ ನಿಂದ ಶ್ರೀಲಂಕಾಕ್ಕೆ 21 ಕಂಟೇನರ್ ಗಳಲ್ಲಿ 260 ಟನ್ ತ್ಯಾಜ್ಯಾ ಬಂದಿತ್ತು. ಆದರೆ ಇದರಲ್ಲಿ ರಬ್ಬರ್, ಕಾರ್ಪೆಟ್ ಜೊತೆಗೆ ಆಸ್ಪತ್ರೆಯ ತ್ಯಾಜ್ಯವಿದೆ ಎನ್ನಲಾಗಿದೆ.
ಹಾಗಾಗಿ ಅಂತರರಾಷ್ಟ್ರೀಯ ಸಂಬಂಧಗಳ ನಿಯಮವನ್ನು ಬ್ರಿಟನ್ ಮುರಿದಿದ್ದ ಹಿನ್ನಲೆಯಲ್ಲಿ ಈ ತ್ಯಾಜ್ಯವನ್ನು ಹಿಂದಕ್ಕೆ ಕಳುಹಿಸಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.