Publish Date: Tue, 05 Jul 2022 (11:43 IST)
Updated Date: Tue, 05 Jul 2022 (10:16 IST)
ಹೈಲ್ಯಾಂಡ್ ಪಾರ್ಕ್ : ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಸೋಮವಾರ ಚಿಕಾಗೋದ ಹೈಲ್ಯಾಂಡ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಮೆರವಣಿಗೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ.
ಈ ದುರ್ಘಟನೆಯಲ್ಲಿ 6 ಜನ ಸಾವಿಗೀಡಾಗಿದ್ದು, 24 ಜನರು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಬಂದೂಕನ್ನು ಬಳಸಿ ಆರೋಪಿಯು ಹತ್ತಿರದಲ್ಲಿದ್ದ ಅಂಗಡಿಯ ಮೇಲ್ಛಾವಣಿಯ ಮೇಲೆ ನಿಂತು ಮೆರವಣಿಗೆಯತ್ತ ಗುಂಡು ಹಾರಿಸಿದ್ದಾನೆ.
ಗುಂಡು ಹಾರಿಸಿದ ಆರೋಪಿ ಬಿಳಿ ಅಥವಾ ನೀಲಿ ಬಣ್ಣದ ಟೀಶರ್ಚ್ ಧರಿಸಿದ್ದಾನೆ. ಪೊಲೀಸರು ಆತನನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಲೇಕ್ಕೌಂಟಿಯ ಪ್ರಮುಖ ಅಪರಾಧ ಕಾರ್ಯಪಡೆಯ ವಕ್ತಾರ ಕ್ರಿಸ್ಟೋಫರ್ ಕೊವೆಲ್ಲಿ ಹೇಳಿದ್ದಾರೆ.
ಗುಂಡಿನ ದಾಳಿ ನಡೆದ ನಂತರ ಜನರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.