Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಶಾಂಘೈ ಲಾಕ್‌ಡೌನ್ ಘೋಷಣೆ !

ಚೀನಾದಲ್ಲಿ ಶಾಂಘೈ ಲಾಕ್‌ಡೌನ್  ಘೋಷಣೆ !
ನವದೆಹಲಿ , ಶನಿವಾರ, 2 ಏಪ್ರಿಲ್ 2022 (13:09 IST)
ಶಾಂಘೈ : ಚೀನಾದ ಶಾಂಘೈ  ನಗರದಲ್ಲಿ ಲಾಕ್ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಜನರು ಆಹಾರ ಸಿಗದೇ ಹಸಿವಿನಿಂದ ಕಂಗೆಟ್ಟಿದ್ದಾರೆ.

ಸರ್ಕಾರದ  ಆದೇಶದ ಮೇರೆಗೆ ನಗರದಲ್ಲಿರುವ ಎಲ್ಲ 2.5 ಕೋಟಿ ಜನರು ಮನೆಯಲ್ಲೇ ಕ್ವಾರಂಟೈನ್  ಆಗಿದ್ದಾರೆ. ಇವರು ಆಹಾರ ಸಾಮಗ್ರಿಗಳನ್ನು ತರಲು ಕೂಡಾ ಮನೆಯಿಂದ ಆಚೆ ಹೋಗುವಂತಿಲ್ಲ.

ನಗರದಲ್ಲಿ ಆಹಾರವನ್ನು ಮನೆ ಬಾಗಿಲಿಗೆ ತಂದು ಕೊಡುವ ಡಿಲಿವರಿ ಬಾಯ್ಗಳ ತೀವ್ರ ಕೊರತೆಯಿದೆ. ಹೀಗಾಗಿ ಸರ್ಕಾರವೇ ಆನ್ಲೈನ್ನಲ್ಲಿ ಆರ್ಡರ್  ಮಾಡಿದ ವಸ್ತುಗಳನ್ನು ಮನೆಯ ಬಳಿ ತಲುಪಿಸುವುದಾಗಿ ಹೇಳಿದರೂ ಅಗತ್ಯ ಪ್ರಮಾಣದಲ್ಲಿ, ನಿಗದಿತ ಸಮಯದಲ್ಲಿ ಆಹಾರ ಒದಗಿಸುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮನೆಯಿಂದ ಆಚೆ ಬರಬಹುದಾಗಿದೆ. ಪರೀಕ್ಷೆ ಮಾಡಿಸಿಕೊಳ್ಳಲು ಉದ್ದುದ್ದ ಸಾಲುಗಳಲ್ಲಿ ನಿಂತ ಜನರನ್ನು ನಿಲ್ಲಿಸಿದ್ದು,

ಈ ವೇಳೆಯೇ ಸೋಂಕು ಹರಡುವ ಭೀತಿ ಹೆಚ್ಚಿದೆ. ಸೋಂಕಿತರನ್ನು ಸರ್ಕಾರ ಐಸೋಲೇಶನ್ ರೂಮಿಗೆ ಬಲವಂತವಾಗಿ ಕಳುಹಿಸುತ್ತಿದ್ದು ಅಲ್ಲಿನ ಪರಿಸ್ಥಿತಿ ಇನ್ನಷ್ಟುಭೀಕರವಾಗಿದೆ. ಆಹಾರ, ಬಿಸಿನೀರಿನ ವ್ಯವಸ್ಥೆಯೂ ಇಲ್ಲ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡ್ತಿಯಲ್ಲಿ ಮೀಸಲು ರದ್ದಾದರೆ ದಂಗೆ !