ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಿದ್ದು ಮತ್ತದೇ ‘ಅಪರಿಚಿತ’ ಟೀಂ?!

Webdunia
ಮಂಗಳವಾರ, 19 ಡಿಸೆಂಬರ್ 2023 (09:40 IST)
ಕರಾಚಿ: ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದ್ದು, ಕರಾಚಿಯ ಆಸ್ಪತ್ರೆಯೊಂದರಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗುತ್ತಿದೆ.

ಸದ್ಯಕ್ಕೆ ದಾವೂದ್ ಗೆ ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಆತನ ಬಳಿ ಯಾರೂ ಹೋಗದಂತೆ ಆಸ್ಪತ್ರೆಯ ಒಂದು ಮಹಡಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಆ ಮಹಡಿಯಲ್ಲಿ ಆತನೊಬ್ಬನೇ ರೋಗಿ. ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಪಾಕ್ ದಾವೂದ್ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಹೊರಹೋಗದಂತೆ ಕಟ್ಟೆಚ್ಚರ ವಹಿಸುತ್ತಿದೆ. ಇದಕ್ಕಾಗಿ ಅಲ್ಲಿ ಇಂಟರ್ ನೆಟ್ ಸೌಲಭ‍್ಯವನ್ನೂ ಕಡಿತಗೊಳಿಸಲಾಗಿದೆ ಎಂಬ ಮಾಹಿತಿಯಿದೆ.

ಹಾಗಿದ್ದರೆ ದಾವೂದ್ ಗೆ ವಿಷವುಣಿಸಿದವರು ಯಾರು? ಕಳೆದ ಕೆಲವು ದಿನಗಳಿಂದ ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಒಬ್ಬೊಬ್ಬರನ್ನಾಗಿ ‘ಅಪರಿಚಿತ’ ತಂಡ ಸುಳಿವೇ ಸಿಗದಂತೆ ಮುಗಿಸುತ್ತಿದೆ. ಇದೀಗ ದಾವೂದ್ ನ ಹತ್ಯೆಗೂ ಅದೇ ತಂಡವೇ ಕಾರ್ಯಾಚರಣೆ ಮಾಡಿರಬಹುದು ಎಂಬ ಗುಮಾನಿ ಹರಡಿದೆ. ಆದರೆ ಇದುವರೆಗೆ ಎಲ್ಲಾ ಉಗ್ರರನ್ನು ಅಪರಿಚಿತ ತಂಡ ಗುಂಡಿಕ್ಕಿ ಕೊಂದಿತ್ತು. ಆದರೆ ದಾವೂದ್ ಗೆ ವಿಷಪ್ರಾಷನ ಮಾಡಿರುವುದು ನಿಗೂಢವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಯೋಜನೆಯಲ್ಲೂ ಹಗರಣವೇ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಪ್ಪು ಲೆಕ್ಕ ಕೊಟ್ಟ ಆರೋಪ

ಬಗರ್ ಹುಕುಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದರೆ ಶಿಕ್ಷೆ: ಸಚಿವ ಕೃಷ್ಣಭೈರೇಗೌಡ

ಡಿಕೆ ಶಿವಕುಮಾರ್, ವಿಜಯೇಂದ್ರ ಬಗ್ಗೆ ಬೆಚ್ಚಿಬೀಳುವ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ನಿಂದಲೇ ರಾಜ್ಯ ಕುಲಗೆಟ್ಟಿದೆ: ಬಿವೈ ವಿಜಯೇಂದ್ರ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಮುಂದಿನ ಸುದ್ದಿ
Show comments