Select Your Language

Notifications

webdunia
webdunia
webdunia
webdunia

ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25

ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25
ಮಾಸ್ಕೋ , ಶನಿವಾರ, 2 ಸೆಪ್ಟಂಬರ್ 2023 (10:02 IST)
ಮಾಸ್ಕೋ : ಚಂದ್ರನ ಅಂಗಳಕ್ಕೆ ರಷ್ಯಾ ಕಳುಹಿಸಿದ್ದ ಲೂನಾ-25 ಮಿಷನ್ ವಿಫಲವಾಗಿ ಅಪ್ಪಳಿಸಿದ ಪರಿಣಾಮವಾಗಿ ಚಂದ್ರನ ಮೇಲ್ಮೈನಲ್ಲಿ ಕುಳಿಯಾಗಿದೆ ಎಂದು ಚಿತ್ರವೊಂದನ್ನು ಬಿಡುಗಡೆ ಮಾಡಿ ನಾಸಾ ಹೇಳಿದೆ.

ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಳಿಯುವ ಮೊದಲೇ ತಾನು ಲ್ಯಾಂಡ್ ಆಗಬೇಕು ಎಂದು ರಷ್ಯಾ ಲೂನಾ-25 ನೌಕೆ ಕಳುಹಿಸಿತ್ತು. ಆದರೆ ರಷ್ಯಾದ ಚಂದ್ರಯಾನ ಮಿಷನ್ ವಿಫಲವಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ಗೆ ಮುಂದಾಗಿದ್ದ ರಷ್ಯಾದ ನೌಕೆ ವಿಫಲವಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು. 

ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ನ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಹೊಸ ಕುಳಿಯನ್ನು ಪತ್ತೆ ಮಾಡಿದೆ. ಅದು ರಷ್ಯಾದ ಲೂನಾ-25 ಮಿಷನ್ನ ಪ್ರಭಾವದ ಸ್ಥಳ ಎಂದು ತೀರ್ಮಾನಿಸಿದೆ.

ಈ ಹೊಸ ಕುಳಿಯು ಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಹೊಸ ಕುಳಿಯು ಲೂನಾ-25 ಅಂದಾಜು ಪ್ರಭಾವದ ಬಿಂದುವಿಗೆ ಹತ್ತಿರವಾಗಿದೆ. ಹೀಗಾಗಿ ಕುಳಿಯು ನೈಸರ್ಗಿಕ ಪ್ರಭಾವದ ಬದಲಿಗೆ ರಷ್ಯಾದ ನೌಕೆಯಿಂದ ಆಗಿರಬಹುದು ಎಂದು ಐಖಔ ತಂಡವು ಹೇಳಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ! ಕಾರಣ ಕೇಳುದ್ರೆ ಶಾಕ್ ಆಗ್ತೀರಾ?