Publish Date: Sat, 31 Mar 2018 (06:46 IST)
Updated Date: Sat, 31 Mar 2018 (06:49 IST)
ರಷ್ಯಾ : ಅಮೇರಿಕ ತನ್ನಲಿರುವ ರಷ್ಯಾ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಿರುವ ಹಿನ್ನಲೆಯಲ್ಲಿ ಇದೀಗ ರಷ್ಯಾ ಕೂಡ ಇದಕ್ಕೆ ಪ್ರತಿಕಾರ ತೀರಿಸಿಕೊಂಡಿದೆ.
ಈ ಹಿಂದೆ ಬ್ರಿಟನ್ ನ ಸ್ಯಾಲಿಸ್ ಬರಿಯಲ್ಲಿ ರಷ್ಯಾದ ಮಾಜಿ ಬೇಹುಗಾರ ಹಾಗೂ ಆತನ ಮಗಳಿಗೆ ವಿಷಪ್ರಾಶನ ಮಾಡಿದ ಘಟನೆಯಲ್ಲಿ ರಷ್ಯಾದ ಕೈವಾಡವಿದೆ ಎಂದು ಆರೋಪಿಸಿ ಅಮೇರಿಕಾ ತನ್ನಲ್ಲಿರುವ 60 ರಷ್ಯಾ ರಾಜತಾಂತ್ರಿಕರನ್ನು ಉಚ್ಚಾಟಿಸಿದಲ್ಲದೆ ಸಿಯಾಟಲ್ ನಲ್ಲಿರುವ ರಷ್ಯಾದ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಮುಚ್ಚಿದೆ. ಈಗ ಇದಕ್ಕೆ ಪ್ರತಿಯಾಗಿ ರಷ್ಯಾ ವಿದೇಶಿ ಸಚಿವ ಸರ್ಗೀ ಲವ್ರೊವ್ ಅವರು,’ರಷ್ಯಾದಲ್ಲಿರುವ ಅಮೇರಿಕಾದ 60 ರಾಜತಾಂತ್ರಿಕರನ್ನು ಉಚ್ಚಾಟಿಸಲಾಗುವುದು ಹಾಗೂ ಆ ದೇಶದ ಕಾನ್ಸುಲೇಟ್ ಕಚೇರಿಯನ್ನು ಮುಚ್ಚಲಾಗುವುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ