Select Your Language

Notifications

webdunia
webdunia
webdunia
webdunia

ನೇಪಾಳದಲ್ಲಿ ರಸ್ತೆ ಅಪಘಾತ: ಸ್ಥಳದಲ್ಲೇ 22 ಮಂದಿ ಸಾವು

ನೇಪಾಳದಲ್ಲಿ ರಸ್ತೆ ಅಪಘಾತ: ಸ್ಥಳದಲ್ಲೇ 22 ಮಂದಿ ಸಾವು
ನೇಪಾಳ , ಬುಧವಾರ, 13 ಅಕ್ಟೋಬರ್ 2021 (14:26 IST)
ನೇಪಾಳ : ರಸ್ತೆ ಅಪಘಾತದಲ್ಲಿ ಸುಮಾರು 32 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ಮುಗು ಜಿಲ್ಲೆಯಲ್ಲಿ ನಡೆದಿದೆ. ಗಮ್ಗಡಿ ನೇಪಾಳ್ಗಂಜ್ ಎಂಬಲ್ಲಿಗೆ ಬಸ್ ತೆರಳುತ್ತಿದ್ದು, ಬಸ್ನಲ್ಲಿದ್ದ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳೂ ಸಾವನಪ್ಪಿದ್ದಾರೆ.


ಇನ್ನು ನೇಪಾಳದ ಹಬ್ಬವಾದ ದಶಾಯಿನ್ಗೆ ಪ್ರಯಾಣಿಕರು ತೆರಳುತ್ತಿದ್ದು, ಈ ಸಂದರ್ಭದಲ್ಲಿ 300 ಮೀಟರ್ಗೂ ಹೆಚ್ಚು ಆಳಕ್ಕೆ ಬಸ್ ಉರುಳಿ ಬಿದ್ದಿದೆ. ಇನ್ನು ಸ್ಥಳದಲ್ಲೇ 22 ಮಂದಿ ಪ್ರಾಣ ಕಳೆದುಕೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೆ ಆಸ್ಪತ್ರೆಗೆ ದಾಖಲಾದ ನಂತರ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಹಾಗೆ ನೇಪಾಳದ ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ. ವಾಯುಪಡೆಯನ್ನೂ ಕೂಡಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಳಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನ: ಬೊಮ್ಮಾಯಿ