ಅಮೆರಿಕಾದಲ್ಲಿ ನಿಂತು ಭಾರತವನ್ನು ತೆಗಳಿ ಚೀನಾ ಹೊಗಳಿದ ರಾಹುಲ್ ಗಾಂಧಿ

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (10:20 IST)
Photo Credit: X
ಟೆಕ್ಸಾಸ್: ಅಮೆರಿಕಾ ಪ್ರವಾಸ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ತೆಗಳಿ ಚೀನಾವನ್ನು ಹೊಗಳಿದ್ದಾರೆ. ರಾಹುಲ್ ಹೇಳಿಕೆ ಈಗ ಭಾರೀ ಟೀಕೆಗೆ ಒಳಗಾಗಿದೆ.

ಅಮೆರಿಕಾ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೆಕ್ಸಾಸ್ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಅವರು ನಿರುದ್ಯೋಗ, ಉದ್ಯೋಗ ಸೃಷ್ಟಿ ವಿಚಾರದಲ್ಲಿ ಭಾರತವನ್ನು ತೆಗಳಿ, ಭಾರತದ ಎದುರಾಳಿ ರಾಷ್ಟ್ರ ಚೀನಾವನ್ನು ಹಾಡಿಹೊಗಳಿದ್ದಾರೆ.

ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಜಾಗತಿಕವಾಗಿ ಉತ್ಪಾದನೆಯಲ್ಲಿ ಚೀನಾ ಮುಂಚೂಣಿಯಲ್ಲಿದ್ದು, ಈ ಕಾರಣಕ್ಕೆ ಚೀನಾದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ. ಆದರೆ ಭಾರತ, ಅಮೆರಿಕಾದಲ್ಲಿ ಉತ್ಪಾದನೆ ಕುಸಿತವಾಗುತ್ತಿದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.

ಭಾರತದಲ್ಲಿ ಕೌಶಲ್ಯಕತೆಗೆ ಕೊರತೆಯಿಲ್ಲ. ಒಂದು ವೇಳೆ ಉತ್ಪಾದನೆಯೊಂದಿಗೆ ಮುಂದುವರಿದರೆ ನಾವೂ ಚೀನಾ ಜೊತೆ ಸ್ಪರ್ಧೆ ನಡೆಸಬಹುದು. ಭಾರತದಲ್ಲಿ ಕೌಶಲ್ಯ ಶಿಕ್ಷಣದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಕೊರತೆಗಳ ಪಟ್ಟಿಯನ್ನೇ ಹೇಳಿದ್ದಾರೆ. ವಿಪಕ್ಷ ನಾಯಕನ ಹೇಳಿಕೆ ಬಿಜೆಪಿ ತೀವ್ರವಾಗಿ ಟೀಕೆ ಮಾಡಿದೆ. ರಾಹುಲ್ ಗೆ ವಿದೇಶಕ್ಕೆ ಹೋಗಿ ಭಾರತದ ಮಾನ ಕಳೆಯುವುದು ಅಭ್ಯಾಅಸವಾಗಿದೆ ಎಂದು ಟೀಕೆ ಮಾಡಿದೆ. ಈ ಹಿಂದೆಯೂ ಅಮೆರಿಕಾ ಪ್ರವಾಸದಲ್ಲಿ ರಾಹುಲ್ ಭಾರತವನ್ನು ಟೀಕಿಸಿ ವಿವಾದಕ್ಕೊಳಗಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ
Show comments