Select Your Language

Notifications

webdunia
webdunia
webdunia
webdunia

ಶಾಕಿಂಗ್...! ಗಂಡು ಮಗು ಬೇಕೆಂದು ಏನ್ ಮಾಡುದ್ರು ಗೋತ್ತ ?

ಶಾಕಿಂಗ್...! ಗಂಡು ಮಗು ಬೇಕೆಂದು ಏನ್ ಮಾಡುದ್ರು ಗೋತ್ತ ?
ಇಸ್ಲಾಮಾಬಾದ್‌ , ಭಾನುವಾರ, 13 ಫೆಬ್ರವರಿ 2022 (14:18 IST)
ಇಸ್ಲಾಮಾಬಾದ್‌ : ಗಂಡು ಮಗುವಾಗುತ್ತದೆ ಎಂಬ ಮೂಢನಂಬಿಕೆಯಿಂದ ಪಾಕಿಸ್ತಾನದ ಗರ್ಭಿಣಿಯೊಬ್ಬರು ತಲೆಗೆ ಮೊಳೆ ಹೊಡೆದುಕೊಂಡಿರುವ ಪ್ರಸಂಗ ನಡೆದಿದೆ.

ದಕ್ಷಿಣ ಏಷ್ಯಾದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು, ಪೋಷಕರಿಗೆ ಉತ್ತಮ ಆರ್ಥಿಕ ಭದ್ರತೆ ಒದಗಿಸುತ್ತಾನೆ ಎಂಬುದು ನಂಬಿಕೆ.

ಈ ಹಿನ್ನೆಲೆಯಲ್ಲಿ ಪಾಕ್‌ ಗರ್ಭಿಣಿಯೊಬ್ಬರು ತಮಗೆ ಗಂಡು ಮಗು ಆಗಲಿ ಎಂದು ಗುಂಡು ಸೂಜಿಯಂತಹ ಮೊಳೆಗಳನ್ನು ತನ್ನ ಹಣೆಗೆ ಹೊಡೆದುಕೊಂಡಿದ್ದಾರೆ ವೈದ್ಯ ಹೈದರ್‌ ಖಾನ್‌ ತಿಳಿಸಿದ್ದಾರೆ. 

ಮಹಿಳೆಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆದರೆ ಅತಿಯಾದ ನೋವಿನಿಂದಾಗಿ ಅವರು ಆಸ್ಪತ್ರೆಗೆ ಬಂದಿದ್ದರು. ಈಕೆಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈಗ ಮತ್ತೆ ಗರ್ಭಿಣಿಯಾಗಿದ್ದು, ಅದು ಕೂಡ ಹೆಣ್ಣು ಎಂದು ವೈದ್ಯರು ಹೇಳಿದ್ದಾರೆ.

ಎಕ್ಸರೇ ತೆಗೆದು ನೋಡಿದಾಗ ಸುಮಾರು 2 ಇಂಚಿನ ಸಣ್ಣ ಮೊಳೆಗಳನ್ನು ಹಣೆಗೆ ಹೊಡೆದುಕೊಂಡಿದ್ದಾರೆ. ಅದೃಷ್ಟವಶಾತ್‌, ಮಹಿಳೆಯ ಮಿದುಳಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಐ. ಪಿ. ಎಲ್. ಹರಾಜು ಬಹಳ ಜೋರು